ರಾಜ್ಯ

ನೀರಜ್ ಜೋಪ್ರಾ ಗೂ ಬಳ್ಳಾರಿ ಜಿಲ್ಲೆಗೂ ನಂಟು: ಜಿಲ್ಲಾ ಪೊಲೀಸ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿ!

ಟೊಕಿಯೊ ಒಲಂಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿರುವ ನೀರಜ್ ಚೋಪ್ರಾರನ್ನು ಪ್ರತೀಯೊಬ್ಬ ಭಾರತೀಯ ಕೂಡ ಕೊಂಡಾಡುತ್ತಿದ್ದಾರೆ. ಚಿನ್ನದ ಪದಕ ಗೆದ್ದಿರುವ ನೀರಜ್ ಜೋಪ್ರಾ ಅವರಿಗೂ ಬಳ್ಳಾರಿ ಜಿಲ್ಲೆಗೂ ನಂಟಿರುವುದು ವಿಶೇಷವಾಗಿದೆ.

ನೀರಜ್ ಜೋಪ್ರಾ ಗೂ ಬಳ್ಳಾರಿ ಜಿಲ್ಲೆಗೂ ನಂಟು: ಜಿಲ್ಲಾ ಪೊಲೀಸ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿ!
ನೀರಜ್ ಚೋಪ್ರಾ
Published On :

ಬಳ್ಳಾರಿ: ಟೊಕಿಯೊ ಒಲಂಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿರುವ ನೀರಜ್ ಚೋಪ್ರಾರನ್ನು ಪ್ರತೀಯೊಬ್ಬ ಭಾರತೀಯ ಕೂಡ ಕೊಂಡಾಡುತ್ತಿದ್ದಾರೆ. ಚಿನ್ನದ ಪದಕ ಗೆದ್ದಿರುವ ನೀರಜ್ ಜೋಪ್ರಾ ಅವರಿಗೂ ಬಳ್ಳಾರಿ ಜಿಲ್ಲೆಗೂ ನಂಟಿರುವುದು ವಿಶೇಷವಾಗಿದೆ. 

ಹರಿಯಾಣ ಮೂಲದ ನೀರಜ್ ಚೋಪ್ರಾ ಜಿಂದಾಲ್ ಕಂಪನಿಯಲ್ಲಿರುವ ಇನ್ಸ್ ಪೈಯರ್ ಇನ್ಸ್ ಟ್ಯೂಟ್ ಆಫ್ ಸ್ಪೋರ್ಟ್ಸ್ ನಲ್ಲಿ ತರಬೇತಿ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಕಂಪನಿ 2017 ರಲ್ಲಿ ಇನ್ಸ್ ಪೈಯರ್ ಇನ್ಸ್ ಟ್ಯೂಟ್ ಆಫ್ ಸ್ಪೋರ್ಟ್ಸ್ ಆರಂಭಿಸಿದೆ. ಈ ಸಂಸ್ಥೆಯಲ್ಲಿ ದೇಶದ ವಿವಿಧ ರಾಜ್ಯದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. 

ಒಲಂಪಿಕ್ಸ್​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ದೇಶ-ವಿದೇಶಗಳ ತರಬೇತಿದಾರರು ಇಲ್ಲಿನ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಈಗ ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ ಹುಡುಗ ನೀರಜ್ ಚೋಪ್ರಾ ಅವರು ಟೊಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಇಲ್ಲಿ ತರಬೇತಿ ಪಡೆದ ನೀರಜ್ ಅವರು, ಸ್ಥಳೀಯ ಪೊಲೀಸರೊಂದಿಗೆ ಅವರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಎಂಜು ಜಿಂದಾಲ್ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನಾವು ನೀರಜ್ ಅವರಿಗೆ ಪ್ರಾಯೋಜಕತ್ವ ನೀಡಿದ್ದೇವೆ, ಹೀಗಾಗಿ ಅವರು ಆಗಾಗ್ಗೆ ತರಬೇತಿ ನೀಡಲು ಇಲ್ಲಿಗೆ ಬರುತ್ತಿದ್ದರು. ಅವರ ದೀರ್ಘಾವಧಿಯ ವಾಸ್ತವ್ಯ ಎಂದರೆ 2019. ಬಲ ಮೊಣಕೈಗೆ ಗಾಯವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಮುಂಬೈನಲ್ಲಿ ಡಾ. ದಿನ್ಶಾ ಪಾರ್ಡಿವಾಲಾ ಶಸ್ತ್ರಚಿಕಿತ್ಸೆ ನಡೆಸಿದ್ದರು. ಬಳಿಕ ಧನರಾಜ್ ಕೌಶಿಕ್ ನೇತೃತ್ವದ ಫಿಸಿಯೋಥೆರಪಿಸ್ಟ್ ತಂಡವು ನೀರಜ್ ಅವರ ಆರೈಕೆ ಮಾಡಿತ್ತು ಎಂದು ಮಾಹಿತಿ ನೀಡಿದ್ದಾರೆ. 

2016ರ ಬಳಿಕ ನೀರಜ್ ಅವರು ಆಗಾಗೆ ಬಳ್ಳಾರಿ ಜಿಲ್ಲೆಗೆ ಬರುತ್ತಿದ್ದರು, ಈ ವೇಳೆ ಪೊಲೀಸರ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದು ಮತ್ತು ಜೀವಗಳನ್ನು ಉಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತೇವೆ. ಚೋಪ್ರಾ ಅವರು ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಕುಡತಿನಿ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ರಫಿ ತಿಳಿಸಿದ್ದಾರೆ. 

ಎಸ್‌ಪಿ ಸೈದುಲು ಅದಾವತ್ ಅವರು ಪ್ರತಿಕ್ರಿಯೆ ನೀಡಿ, ನಮ್ಮ ಜಾಗೃತಿ ಕಾರ್ಯಕ್ರಮಗಳಲ್ಲಿ ನೀರಜ್ ಅವರು ಭಾಗಿಯಾಗುತ್ತಿದ್ದದ್ದು ಸಂತಸ ತರುತ್ತಿತ್ತು. ನಮ್ಮ ದೇಶಕ್ಕೆ ಹೆಮ್ಮೆ ತಂದಿರುವ ನೀರಜ್ ಜೊತೆ ಬಳ್ಳಾರಿ ಪೊಲೀಸರು ಇದ್ದದ್ದು ಸಂತಸ ತಂದಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.