ಬೆಂಗಳೂರು: ಗೂಂಡಾ ಕಾಯ್ದೆಯಡಿ ಜೂಜುಕೋರನ ಬಂಧನ
ನಗರದ ಹಲವಾರು ಕಡೆಗಳಲ್ಲಿ ಜೂಜು ಅಡ್ಡೆಗಳನ್ನು ನಡೆಸುತ್ತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತನಾಗಿದ್ದ ಜೂಜುಕೋರನೊಬ್ಬನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ನಗರದ ಹಲವಾರು ಕಡೆಗಳಲ್ಲಿ ಜೂಜು ಅಡ್ಡೆಗಳನ್ನು ನಡೆಸುತ್ತ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತನಾಗಿದ್ದ ಜೂಜುಕೋರನೊಬ್ಬನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.
ಹರಿರಾಜಶೆಟ್ಟಿ ಅಲಿಯಾಸ್ ಹರೀಶ್ (58) ಎಂಬಾತನನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಧಿಸಿದ್ದಾರೆ. ಈತ ನಗರದ ಹಲವಾರು ಕಡೆಗಳಲ್ಲಿ ರಿಕ್ರಿಯೇಷನ್ ಕ್ಲಬ್, ವಿಡಿಯೋಗೇಮ್ ಸೆಂಟರ್‍ಗಳಲ್ಲಿ ಅದೃಷ್ಟದ ಜೂಜಾಟಗಳನ್ನು ನಡೆಸುತ್ತಿದ್ದನೆಂದು ತಿಳಿದುಬಂದಿದೆ.
ಈತನ ವಿರುದ್ಧ ವೈಯಾಲಿಕಾವಲ್, ಹೈ ಗ್ರೌಂಡ್ಸ್ ಕಬ್ಬನ್‍ಪಾರ್ಕ್, ಕೋರಮಂಗಲ, ಅಶೋಕನಗರ, ಕೆಪಿ ಅಗ್ರಹಾರ, ಬಸವೇಶ್ವರನಗರ ಮತ್ತು ಇಂದಿರಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಜೂಜು ಕೇಂದ್ರಗಳಲ್ಲಿ ಜೂಜಾಟ ನಡೆಸುತ್ತಿದ್ದ ಬಗ್ಗೆ 2014 ರಿಂದ 13 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
2014 ರಿಂದ 13 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದರೂ ಲೆಕ್ಕಿಸದೆ ತನ್ನ ಕಾನೂನು ಬಾಹಿರ ಜೂಜಾಟದ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಿದ್ದನು. ಅಲ್ಲದೆ, ಈತನು ನಡೆಸುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವ ಪೊಲೀಸ್ ಅಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಕಾರಿಗಳ ತೇಜೋವಧೆ ಮಾಡುವುದನ್ನು ರೂಢಿಸಿಕೊಂಡಿದ್ದನು.
ಸಿಸಿಬಿ ಅಕಾರಿಗಳು ಸಲ್ಲಿಸಿದ್ದ ವರದಿಯನ್ನು ಡಿಸಿಪಿ ಹಾಗೂ ಜಂಟಿ ಪೊಲೀಸ್ ಆಯುಕ್ತರು (ಅಪರಾಧ)ರವರು ಅನುಮೋದಿಸಿ ಶಿಫಾರಸು ಮಾಡಿದ್ದ ಮೇರೆಗೆ ಪೊಲೀಸ್ ಆಯುಕ್ತರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಆದೇಶ ಮಾಡಿದ್ದರು. ಜೂಜುಕೋರರ ವಿರುದ್ಧ ಪ್ರಥಮ ಬಾರಿಗೆ ಗೂಂಡಾ ಕಾಯ್ದೆ ಜಾರಿಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


