ಬ್ಯುಸಿನೆಸ್ ಪಾರ್ಟನರ್ ನಿಂದ ಲೈಂಗಿಕ ದೌರ್ಜನ್ಯ: ದೂರು ದಾಖಲಿಸಿದ ಮಹಿಳೆ
ವ್ಯವಹಾರದ ಮಾತುಕತೆ ವೇಳೆ ತನ್ನ ಬ್ಯುಸಿನೆಸ್ ಪಾರ್ಟನರ್ ಲೈಂಗಿಕ ಕಿರುಕುಳ ಎಸಗಿದ ಎಂದು 29 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಬೆಂಗಳೂರು: ವ್ಯವಹಾರದ ಮಾತುಕತೆ ವೇಳೆ ತನ್ನ ಬ್ಯುಸಿನೆಸ್ ಪಾರ್ಟನರ್ ಲೈಂಗಿಕ ಕಿರುಕುಳ ಎಸಗಿದ ಎಂದು 29 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಕೋರಮಂಗಲ ನಿವಾಸಿ ಪ್ರೀತಿ(ಹೆಸರು ಬದಲಾಯಿಸಲಾಗಿದೆ) ಕೋರಮಂಗಲ ಠಾಣೆಯಲ್ಲಿ ಕಳೆದ ವಾರ ದೂರು ನೀಡಿದ್ದಾರೆ.
2016 ರಲ್ಲಿ ಪ್ರೀತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಅರ್ಜಿತ್ ಮಜುಂದಾರ್ ನನ್ನು ಭೇಟಿ ಮಾಡಿದ್ದರು, ಆತ ಕೂಡ ಅದೇ ಕಂಪನಿ ಉದ್ಯೋಗಿಯಾಗಿದ್ದ.
2017 ರಲ್ಲಿ ಪ್ರೀತಿ ಕಂಪನಿಯ ಉದ್ಯೋಗ ತೊರೆದು ಆರೋಪಿ ಜೊತೆ ಸೇರಿ ಸ್ವಂತ ಕಂಪನಿ ತೆರೆಯಲು ನಿರ್ಧರಿಸಿದರು. 2018 ರಲ್ಲಿ ಕೋರಮಂಗಲದಲ್ಲಿ ಸಾವಯವ ಹತ್ತಿ ಬಟ್ಟೆ ಕಂಪನಿ ಆರಂಭಿಸಿದರು.
ನಾನು 23 ಲಕ್ಷ ಬಂಡವಾಳ ಹೂಡಿದ್ದೆ, ಆತ ಯಾವುದೇ ಹಣ ನೀಡಿರಲಿಲ್ಲ, ಕಚೇರಿ ವೇಳೆ ಆತ ಅಸಭ್ಯವಾಗಿ ವರ್ತಿಸಲು ಆರಂಭಿಸಿದ, ಕಂಪನಿ ಸಂಬಂಧ ಚರ್ಚಿಸುವಾಗ ನನ್ನನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ, ನಾನು ಇದನ್ನು ವಿರೋಧಿಸಿ ಎಚ್ಚರಿಕೆ ನೀಡಿದ್ದೆ.
ನಾನು ಅವನನ್ನು ಎದುರಿಸಿದಾಗ, ಅವನು ನನ್ನ ವೈಯಕ್ತಿಕ ಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಆತನ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


