ಬಿಬಿಎಂಪಿ-ಬೆಸ್ಕಾಂ ಸಹಭಾಗಿತ್ವದಲ್ಲಿ ಕೋವಿಡ್-19 ಸಹಾಯವಾಣಿ ಆರಂಭ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿತ ಸಮಸ್ಯೆಗಳ ಇತ್ಯರ್ಥಪಡಿಸಲು ಬೆಸ್ಕಾಂ ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ 1912 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿತ ಸಮಸ್ಯೆಗಳ ಇತ್ಯರ್ಥಪಡಿಸಲು ಬೆಸ್ಕಾಂ ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ 1912 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.
ಗುರುವಾರ ನಗರದ ಕೆ.ಆರ್.ವೃತ್ತದ ಬೆಸ್ಕಾಂ ಕಚೇರಿಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಈ ಸಹಾಯವಾಣಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋವಿಡ್ ರೋಗಿಗಳಿಗೆ ಸಂಬಂಧಿಸಿದಂತೆ ಹಾಸಿಗೆ ಹಂಚಿಕೆ, ಆಸ್ಪತ್ರೆಗೆ ಸಂಬಂಧಿಸಿದ ಬಿಲ್ಲಿಂಗ್ ಸಮಸ್ಯೆಗಳು ಹಾಗೂ ಸಾಮಾನ್ಯ ಮಾಹಿತಿಯನ್ನು ನೀಡುವಲ್ಲಿ ಸಾರ್ವಜನಿಕರಿಗೆ ಈ ಸಹಾಯವಾಣಿ ನೆರವು ನೀಡಲಿದೆ ಎಂದು ಹೇಳಿದ್ದಾರೆ.
15 ಲೈನ್'ಗಳ ಜೊತೆಗೆ ಹೊಸದಾಗಿ 15 ಹೊಸ ಲೈನ್ ಗಳನ್ನು ಸೇರಿಸಿ ಒಟ್ಟು 30 ಲೈನ್'ಗಳಿಂದ ಕೋವಿಡ್ ಸೋಂಕಿಗೆ ಸಂಬಂಧಿಸಿದ ಕರೆಗಳನ್ನು ನಿಯೋಜನೆಗೊಂಡಿಸುವ ಸಿಬ್ಬಂದಿ ಕರೆ ಸ್ವೀಕರಿಸಿ, ಅಗತ್ಯ ಮಾಹಿತಿ ಒದಗಿಸಲಿದ್ದಾರೆಂದು ತಿಳಿಸಿದ್ದಾರೆ.
ಕೋವಿಡ್ ಸೋಂಕಿನ ಸಲುವಾಗಿ ರಾಜ್ಯ ಸರ್ಕಾರದ ಆಪ್ತಮಿತ್ರ 14410 ಸಹಾಯವಾಣಿ ಅಸ್ತಿತ್ವದಲ್ಲಿದ್ದು, ಆ್ಯಂಬುಲೆನ್ಸ್'ಗಾಗಿ 108, ಕೋವಿಡ್ ರೋಗ ಲಕ್ಷಣಗಳಿದ್ದರೆ 104 ಹಾಗೂ ಪಾಲಿಕೆ ಎಲ್ಲಾ 8 ವಲಯಗಳಲ್ಲಿ ಸ್ಥಾಪಿಸಿರುವ ಕೋವಿಡ್ ವಾರ್ ರೂಂನಲ್ಲಿಯೂ ಒಂದೊಂದು ಸಹಾಯವಾಣಿ ಸಂಖ್ಯೆಗಳಿವೆ.
ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವಿಚಾರಣೆಯ ಕರೆಗಳನ್ನು ಬೆಸ್ಕಾಂ ಅಡಿ ಕಾರ್ಯನಿರ್ವಹಿಸುವ ಸಹಾಯವಾಣಿ 1912ರಲ್ಲಿರುವ ಸದಸ್ಯರೇ ಸ್ವೀಕರಿಸಿ ಅಗತ್ಯ ಮಾಹಿತಿ ನೀಡುವರು ಎಂದು ಮಾಹಿತಿ ನೀಡಿದ್ದಾರೆ.
1912 ಸಹಾಯವಾಣಿಯಲ್ಲಿ ರೋಗಿಯ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ. ರೋಗಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ತುರ್ತು ರಹಿತವಾಗಿದ್ದರೆ ಮತ್ತು ಎಸ್ಆರ್'ಎಫ್ ಐಡಿ ಹಾಗೂ ಬಿಯು ಸಂಖ್ಯೆಯನ್ನು ಹೊಂದಿದ್ದರೆ ಅಂತಹ ರೋಗಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಬಿಬಿಎಂಪಿಗೆ ರವಾನಿಸಲಾಗುತ್ತದೆ. ನಂತರ ಪಾಲಿಕೆಯ ವೈದ್ಯರ ತಂಡವು ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆಯ ಅವಶ್ಯಕತೆಯಿದೆಯೇ ಎಂಬುದನ್ನು ನಿರ್ಧರಿಸಿ, ಅಗತ್ಯಕ್ಕೆ ತಕ್ಕಂತೆ ಹಾಸಿಗೆಗಳನ್ನು ಒದಗಿಸುತ್ತೇವೆಂದು ಹೇಳಿದ್ದಾರೆ.
ರೋಗವು ಸಾರಿ ಅಥವಾ ಐಎಲ್ಐ ಆಗಿದ್ದು, ಸೋಂಕು ದೃಢಪಟ್ಟಿದ್ದ ಅಥವಾ ದೃಢಪಡದಿದ್ದ ಪಕ್ಷದಲ್ಲಿ ತುರ್ತು ಸಂದರ್ಭಗಳಲ್ಲಿ ಅಂತಹ ಕರೆಗಳನ್ನು 108ಕ್ಕೆ ವರ್ಗಾವಣೆ ಮಾಡುತ್ತೇವೆ. 108 ಸಹಾಯವಾಣಿಯ ವೈದ್ಯರ ತಂಡವು ಹಾಸಿಗೆ ಹಂಚಿಕೆ ಮತ್ತು ಆ್ಯಂಬುಲೆನ್ಸ್ ಗಳನ್ನು ತುರ್ತು ಪರಿಸ್ಥಿತಿಯಲ್ಲಿ ಒದಗಿಸುತ್ತದೆ. ರೋಗಿಯು ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸರ್ಕಾರಿ ಕೋಟದ ಅಡಿಯಲ್ಲಿ ಬಿಲ್ಲುಗಳನ್ನು ಇತ್ಯರ್ಥಪಡಿಸುವ ಬಗ್ಗೆ ದೂರುಗಳಿದ್ದರೆ ಅಂತಹ ಕರೆಗಳನ್ನು ಎಸ್ಎಎಸ್'ಟಿ ತಂಡಕ್ಕೆ ರವಾನಿಸಲಾಗುತ್ತದೆ. ಒಂದು ವೇಳೆ ಸಹಾಯವಾಣಿ ಲಭ್ಯವಾಗದಿದ್ದಲ್ಲಿ ಶೀಘ್ರ ಸ್ಪಂದನೆಗೆ ವಾಟ್ಸ್ ಆ್ಯಪ್ ನಂಬರ್'ಗೆ 9480812450 ತಮ್ಮ ವಿಚಾರಣೆಗಳನ್ನು ಕಳುಹಿಸಬಹುದು ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


