ಅಕ್ಟೋಬರ್ 1 ರಿಂದ ಡ್ರೀಮ್ ಕ್ಲಾಸ್ ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ಬಸ್ ಸಂಚಾರ ಆರಂಭ
ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ) ವತಿಯಿಂದ ಮಂಗಳೂರು, ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್, ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ವಾಹನ ಹಾಗೂ ಉಡುಪಿ, ಹೈದರಾಬಾದ್...

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ) ವತಿಯಿಂದ ಮಂಗಳೂರು, ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್, ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ವಾಹನ ಹಾಗೂ ಉಡುಪಿ, ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 1 ರಿಂದ ಪ್ರಾರಂಭಿಸಲಾಗುತ್ತಿದೆ.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಸ್ಟ್ಯಾಂಡರ್ಡ್ ಆಪರೇಷನ್ ಕಾರ್ಯವಿಧಾನದ (ಎಸ್ಒಪಿ) ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ ಇಂತಿವೆ
ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿಅಕ್ಸಲ್ ಎ.ಸಿ. ಸ್ಲೀಪರ್ ಬಸ್ ಮಧ್ಯಾಹ್ನ 3 ಗಂಟೆಗೆ ಹೊರಟು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು, ಹೈದರಾಬಾದ್ ಗೆ ಮಾರನೇ ದಿನ ಬೆಳಗ್ಗೆ 8.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,700.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


