ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ಜೊತೆ ನಂಟಿದ್ದ ಮತ್ತೊಬ್ಬ ಪೆಡ್ಲರ್ ಬಂಧನ, ಅಪಾರ ಪ್ರಮಾಣದ ಡ್ರಗ್ಸ್ ವಶಕ್ಕೆ!
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಅವರ ಜೊತೆ ಸಂಪರ್ಕ ಹೊಂದಿದ್ದ ಮತ್ತೋರ್ವ ಶಂಕಿತ ಡ್ರಗ್ ಪೆಡ್ಲರ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಅವರ ಜೊತೆ ಸಂಪರ್ಕ ಹೊಂದಿದ್ದ ಮತ್ತೋರ್ವ ಶಂಕಿತ ಡ್ರಗ್ ಪೆಡ್ಲರ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದೇ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ರಾಗಿಣಿ ಆಪ್ತ ರವಿಶಂಕರ್ ಹೇಳಿಕೆ ಮೇರೆಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇದೀಗ ಮತ್ತೋರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಬಂಧಿಸಿದ್ದು ಮಾತ್ರವಲ್ಲದೇ ಆತನಿಂದ ಅಪಾರ ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಶ್ರೀನಿವಾಸ ಸುಬ್ರಮಣಿಯನ್ ಅಲಿಯಾಸ್ ಶ್ರೀ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡ್ರಗ್ಸ್ ಪ್ರಕರಣದ ವಿಚಾರಣೆ ವೇಳೆ ಶ್ರೀ ಎಂಬಾತನ ಹೆಸರು ಬಂದಿತ್ತು. ಹೀಗಾಗಿ ಆತನ ಕುರಿತು ಮಾಹಿತಿ ಕಲೆ ಹಾಕಿದ್ದೆವು. ಇದೀಗ ಅತನನ್ನು ಬಂಧಿಸಿದ್ದು, ಬಂಧನದ ವೇಳೆ 11 ಎಕ್ಸ್‌ಟಸಿ ಮಾತ್ರೆಗಳು, 100 ಗ್ರಾಂಗೂ ಹೆಚ್ಚು ಗಾಂಜಾ, 1.1 ಗ್ರಾಂ ಎಂಡಿಎಂಎ, 0.5 ಗ್ರಾಂ ಹಷೀಶ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಈ ಶ್ರೀ ಎಂಬಾತ ಸಾದಹಳ್ಳಿ ಗೇಟ್ ಬಳಿ ರೆಸಾರ್ಟ್ ನಡೆಸುತ್ತಿದ್ದಾನೆ. ಈತ ಬೇರೆ ರೆಸಾರ್ಟ್‌ಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಈತನಿಗೂ ರಾಗಿಣಿಗೂ ನಂಟಿತ್ತು ಎನ್ನಲಾಗಿದೆ. ಈತನ ರೆಸಾರ್ಟ್‌ಗೆ ರಾಗಿಣಿ ಭೇಟಿ ನೀಡಿದ್ದರು ಎನ್ನಲಾಗಿದೆ. ಬಂಧಿತ ರವಿಶಂಕರ್ ಮತ್ತು ಮತ್ತೋರ್ವ ಬಂಧಿತ ಆರೋಪಿ, ಈ ಶ್ರೀಬಗ್ಗೆ ಮಾಹಿತಿ ನೀಡಿದ್ದರು. ಶ್ರೀ.. ಮತ್ತು ವೈಭವ್ ಜೈನ್ ಬಿಸಿನೆಸ್ ಪಾರ್ಟ್ನರ್ ಆಗಿದ್ದರಂತೆ. ಇಬ್ಬರೂ ಬೆಂಗಳೂರು ಹೊರ ವಲಯದದಲ್ಲಿ ಬಾಡಿಗೆ ಮನೆಯಲ್ಲಿದ್ದರಂತೆ. ಅಲ್ಲಿಂದಲೇ ಅವರು ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು.
ಇದೇ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಶ್ರೀ ನಿವಾಸದ ಮೇಲೆ ದಾಳಿ ಮಾಡಿ ಅತನನ್ನು ವಶಕ್ಕೆ ಪಡೆದಿದ್ದಾರೆ. ಈಗ ಶ್ರೀ ಗೆ ಸಿಸಿಬಿ ಡ್ರಿಲ್ ಶುರುವಾದ್ದು, ಈತನಿಂದ ಇನ್ನಷ್ಟು ಪೆಡ್ಲರ್‌ಗಳ ಬಗ್ಗೆ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


