ನಾಲ್ವರು ಎಂಜಿನಿಯರ್'ಗಳ ನೇಮಕ ಆದೇಶ ಮರುಪರಿಶೀಲಿಸಿ: ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಆಯುಕ್ತ ಪತ್ರ
ನಾಲ್ವರು ಎಂಜಿನಿಯರ್ ಗಳನ್ನು ಮತ್ತೆ ಬಿಬಿಎಂಪಿಗೆ ನೇಮಿಸಿರುವ ಆದೇಶದ ಕುರಿತು ಸ್ಪಷ್ಟನೆಗಳನ್ನು ನೀಡಿ ಎಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಪತ್ರ ಬರೆದಿದ್ದಾರೆ.

ಬೆಂಗಳೂರು: ನಾಲ್ವರು ಎಂಜಿನಿಯರ್ ಗಳನ್ನು ಮತ್ತೆ ಬಿಬಿಎಂಪಿಗೆ ನೇಮಿಸಿರುವ ಆದೇಶದ ಕುರಿತು ಸ್ಪಷ್ಟನೆಗಳನ್ನು ನೀಡಿ ಎಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಪತ್ರ ಬರೆದಿದ್ದಾರೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿರುವ ಅವರು, ಮಲ್ಲೇಶ್ವರ, ಗಾಂಧಿನಗರ, ರಾಜರಾಜೇಶ್ವರಿ ನಗರ ವಿಭಾಗದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ನ್ಯಾಯಮೂರ್ತಿ ನಾಗಮೋಹನ್ ದಾರ್ ವರದಿಯಲ್ಲಿ ಉಲ್ಲೇಖಿಸಿದ ನಾಲ್ವರು ಎಂಜಿನಿಯರ್ ಗಳನ್ನು ಈ ಹಿಂದೆ ವಜಾಗೊಳಿಸಲಾಗಿತ್ತು. ಇದೀಗ ಮತ್ತೆ ನಾಲ್ವರು ಎಂಜಿನಿಯರ್ ಗಳನ್ನು ನೇಮಿಸಲಾಗಿದ್ದು. ಈ ಆದೇಶವನ್ನು ಮರುಪರಿಶೀಲಿಸುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಅಕ್ರಮದಲ್ಲಿ ಭಾಗಿಯಾಗಿ ತಪ್ಪಿತಸ್ಥರು ಎಂದು ಗುರುತಿಸಲ್ಪಟ್ಟ ಎಂಜಿನಿಯರ್ ಗಳಾದ ಡಿ.ಹರೀಶ್ ಕುಮಾರ್, ವಿ.ಮೋಹನ್, ಜಿ.ಆರ್.ಕುಮಾರ್, ಎನ್.ಎಸ್.ರೇವಣ್ಣ ಅವರನ್ನು ಈಗಾಗಲೇ ಬಿಬಿಎಂಪಿ ಸೇವೆಯಿಂದ ಬಿಡುಗಡೆ ನೀಡಲಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


