ದೂರವಾಣಿ, ಇ-ಮೇಲ್ ಸಂಭಾಷಣೆ ವೇಳೆ ವಕೀಲರಿಂದ ನಿಂದನಾತ್ಮಕ ಭಾಷೆ ಬಳಕೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಬೇಸರ
ಹೈಕೋರ್ಟ್ ನೌಕರರ ಜೊತೆಗೆ ದೂರವಾಣಿ ಹಾಗೂ ಇ-ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಹೈಕೋರ್ಟ್ ನೌಕರರ ಜೊತೆಗೆ ದೂರವಾಣಿ ಹಾಗೂ ಇ-ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಕೆ ಮಾಡುತ್ತಿರುವುದಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಚಾರಣೆ ಆರಂಭವಾದಾಗ ವಕೀಲ ಜಗದೀಶ್ ಶಾಸ್ತ್ರಿ ವಿರುದ್ಧ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, ರಿಜಿಸ್ಟ್ರಾರ್ ಅವರಿಗೆ ಕಳುಹಿಸಿರುವ ಇ-ಮೇಲ್ ಹಾಗೂ ಸಿ.ಜೆ.ಕಚೇರಿ ಕಾರ್ಯದರ್ಶಿ ಜೊತೆ ಮಾತನಾಡುವಾಗ ನಿಂದನಾತ್ಮಕ ಭಾಷಣೆ ಬಳಸಿರುವುದು ಸೂಕ್ತವಲ್ಲ ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿಯಾಗಿ ವಕೀಲರು ಸಲ್ಲಿಸಿರುವ ಎಲ್ಲಾ ಮೆಮೊಗಳನ್ನೂ ಓದಿ ತುರ್ತು ಎಂಬಂತಹ ಅರ್ಜಿಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿದೆ. ‘ನಾನು ವೈಯಕ್ತಿಕವಾಗಿ 200ರಿಂದ 300 ಇ–ಮೇಲ್‌ಗಳನ್ನು ಪ್ರತಿನಿತ್ಯ ರಾತ್ರಿ 2ರಿಂದ 3 ಗಂಟೆ ತನಕ ಪರಿಶೀಲಿಸುತ್ತಿದ್ದೇನೆ. ಕೆಲವು ವಕೀಲರು ಶೀಘ್ರಗತಿಯಲ್ಲಿ ಉತ್ತರಗಳನ್ನು ನಿರೀಕ್ಷಿಸುತ್ತಿದ್ದಾರೆ.
1,200 ಸಿಬ್ಬಂದಿಯಲ್ಲಿ 101 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಬೇರೆ ರಾಜ್ಯದ ಹೈಕೋರ್ಟ್‌ಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ, ನಂತರವೂ ಅಸಮಾಧಾನ ಇದ್ದರೆ ನನ್ನ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೇ ದೂರು ಸಲ್ಲಿಸಬಹುದು’ ಎಂದರು. ಈ ಸಂದರ್ಭದಲ್ಲಿ ವಕೀಲ ಶಾಸ್ತ್ರಿ ಅವರು ಮುಖ್ಯನ್ಯಾಯಮೂರ್ತಿಗಳ ಬಳಿ ಕ್ಷಮೆ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


