ಏಕಾಏಕಿ ದಾಳಿ ಮಾಡಿದ್ದೀರಿ, ನಾನು ಬರೋದಿಲ್ಲ: ವಶಕ್ಕೆ ಪಡೆಯಲು ತೆರಳಿದ ಅಧಿಕಾರಿಗಳ ಮೇಲೆ ಎಗರಾಡಿದ ನಟಿ ಸಂಜನಾ
ನಾನೇಕೆ ನಿಮ್ಮೊಂದಿಗೆ ಬರಬೇಕು, ನೀವು ನನಗೆ ನೋಟಿಸ್ ನೀಡಿಲ್ಲ, ಏಕಾಏಕಿ ದಾಳಿ ನಡೆಸಿದ್ದೀರಿ? ನೇನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ ಪೊಲೀಸರ ಮೇಲೆ ನಟಿ ಸಂಜನಾ ಗುಲ್ರಾನಿಯವರು ಕೂಗಾಡಿ ರಂಪಾಟ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಬೆಂಗಳೂರು: ನಾನೇಕೆ ನಿಮ್ಮೊಂದಿಗೆ ಬರಬೇಕು, ನೀವು ನನಗೆ ನೋಟಿಸ್ ನೀಡಿಲ್ಲ, ಏಕಾಏಕಿ ದಾಳಿ ನಡೆಸಿದ್ದೀರಿ? ನೇನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲು ಮುಂದಾದ ಸಿಸಿಬಿ ಪೊಲೀಸರ ಮೇಲೆ ನಟಿ ಸಂಜನಾ ಗುಲ್ರಾನಿಯವರು ಕೂಗಾಡಿ ರಂಪಾಟ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಇಂದು ಬೆಳಿಗ್ಗೆಯಷ್ಟೇ ಇಂದಿರಾನಗರದಲ್ಲಿರುವ ಸಂಜನಾ ಅವರ ಮನೆ ಮೇಲೆ ಸಿಸಿಬಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ.
ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲಿ ಮಲಗಿದ್ದು, ನಿದ್ರೆಯಿಂದ ಎದ್ದಿರಲಿಲ್ಲ. ಸಿಸಿಬಿ ಪೊಲೀಸರು ಮನೆಯ ಬಳಿ ಬಂದ ಸಂದರ್ಭದಲ್ಲಿ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ನೋಟಿಸ್ ತೋರಿಸಿದ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಮಲಗಿದ್ದ ಸಂಜನಾ ಅವರಿಗೆ ವಿಚಾರವನ್ನು ತಿಳಿಸಿ, ತನಿಖೆಗೆ ಸಹಕಾರ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಸಂಜನಾ ಅವರನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.
ಈ ವೇಳೆ ಕೂಗಾಡಿರುವ ಸಂಜನಾ ಅವರು, ಮನೆಯಲ್ಲಿ ಏನೂ ಸಿಗದೇ ಇದ್ದರೂ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ. ನಾನೇಕೆ ನಿಮ್ಮೊಂದಿಗೆ ಬರಬೇಕು. ನನಗೆ ನೀವು ನೋಟಿಸ್ ಕೊಟ್ಟಿಲ್ಲ. ಏಕಾಏಕಿ ದಾಳಿ ನಡೆಸಿದ್ದೀರಿ. ನಾನೇನು ಆರೋಪಿನಾ? ನಾನು ಬರುವುದಿಲ್ಲ ಎಂದು ರಂಪಾಟ ಮಾಡಿದ್ದಾರೆಂದು ತಿಳಿದುಬಂದಿದೆ.
ಸಂಜಾನ ಅವರು ತೀವ್ರವಾಗಿ ಕೂಗಾಡುತ್ತಿದ್ದಂತೆಯೇ ಅಧಿಕಾರಿಗಳು, ನೀವೀಗ ನಮ್ಮ ವಶದಲ್ಲಿದ್ದೀರಿ. ಹೀಗಾಗಿ ನಾವು ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ನಾವು ಹೇಳಿದ್ದನ್ನು ನೀವು ಕೇಳಬೇಕು. ಸರ್ಜ್ ವಾರೆಂಟ್ ಸಂದರ್ಭದಲ್ಲಿ ವಿರೋಧ ಮಾಡಿದರೆ ನಿಮಗೇ ಕಷ್ಟವಾಗುತ್ತದೆ ಎಂದು ಹೇಳಿ, ಸಂಜನಾ ಅವರನ್ನು ತಣ್ಣಗಾಗುವಂತೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಇನ್ನು ಸಂಜನಾ ಅವರನ್ನು ಇದೀಗ ವಶಕ್ಕೆ ಪಡೆದಿರುವ ಪೊಲೀಸರು, ಸಂಜನಾ ಅವರ ಮೊಬೈಲ್, ಪರ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


