ಹೆಬ್ಬಾಳ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆ
ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತಿ ದಿನ 100 ಮಿಲಿಯನ್ ಸಂಸ್ಕರಿತ ನೀರನ್ನು ಪೂರೈಕೆ ಮಾಡುವ ಗುರಿ ಹೊಂದಿರುವ 250 ಕೋಟಿ ರೂ ವೆಚ್ಚದ ಹೆಬ್ಬಾಳ ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆಯಿದೆ.

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪ್ರತಿ ದಿನ 100 ಮಿಲಿಯನ್
ಸಂಸ್ಕರಿತ ನೀರನ್ನು ಪೂರೈಕೆ ಮಾಡುವ ಗುರಿ ಹೊಂದಿರುವ 250 ಕೋಟಿ ರೂ ವೆಚ್ಚದ ಹೆಬ್ಬಾಳ ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆಯಿದೆ.
ಇದು ಪೂರ್ಣಗೊಂಡರೆ, ಅಂತರ್ಜಲ ಮರು ಪೂರಣಕ್ಕೆ ನೆರವಾಗಲಿದ್ದು, ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯಿರುವುದಾಗಿ ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ಎಸ್. ಜಯರಾಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತಿಳಿಸಿದ್ದಾರೆ.
ಕಂಟ್ರಾಕ್ಟರ್ ಎನ್ವಿರಾನ್ ಟೆಕ್ ನಿಂದ ಶೇ. 78 ರಷ್ಟು ಮುಗಿದ್ದು, ಹೆಬ್ಬಾಳ ಪ್ರದೇಶದಿಂದ ಬರುವ ತ್ಯಾಜ್ಯ ನೀರನ್ನು ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಶುದ್ದೀಕರಿಸಲಾಗುತ್ತದೆ.ನಂತರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುವುದು ಎಂದು ತ್ಯಾಜ ನೀರು ನಿರ್ವಹಣಾ ಮುಖ್ಯ ಎಂಜಿನಿಯರ್ ವಿ. ಗಂಗಾಧರ್ ತಿಳಿಸಿದ್ದಾರೆ.
ಅಂತರ್ಜಲ ಮರಪೂರಣದಿಂದ ಮೂರು ಜಿಲ್ಲೆಗಳಲ್ಲಿ ಬೋರ್ ವೇಲ್ ಗಳಿಗೆ ನೀರು ಬರಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ
ಹೆಬ್ಬಾಳ- ನಾಗವಾರ ಯೋಜನೆಯ ಉಸ್ತುವಾರಿ ಮತ್ತು ಸಹಾಯಕ ಕಾರ್ಯಕಾರಿ ಎಂಜಿನಿಯರ್ ರವೀಂದ್ರನಾಥನ್ ಹೇಳಿದ್ದಾರೆ.
ಹೆಬ್ಬಾಳದಲ್ಲಿನ 50 ಎಂಎಲ್ ಡಿ ಸಾಮರ್ಥ್ಯದ ಹಳೆಯ ತ್ಯಾಜ ನೀರು ನಿರ್ವಹಣಾ ಘಟಕವನ್ನು ನವೀಕರಿಸಲಾಗುತ್ತಿದೆ.
ನವೀಕರಣಕ್ಕಾಗಿ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಶುದ್ದೀಕರಿಸಿದ ನೀರಿನ ಹರಿವಿಗೆ ಅನುಕೂಲವಾಗುವಂತೆ ನೀರಾವರಿ ಇಲಾಖೆ ಐದು ಪಂಪ್‌ಹೌಸ್‌ಗಳನ್ನು ಸ್ಥಾಪಿಸಿದೆ.ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಹೆಬ್ಬಾಳದಿಂದ ಹೆಣ್ಣೂರುವರೆಗೂ ಹರಿಸಲಾಗುವುದು, ತದ ನಂತರ ಬಾಗಲೂರುವರೆಗೂ ನಂತರ ಚಿಕ್ಕಬಳ್ಳಾಪುರದವರೆಗೂ ನೀರನ್ನು ಹರಿಸಲಾಗುವುದು ಎಂದು ರವೀಂದ್ರನಾಥ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


