ರಾಜ್ಯ

ಸಚಿವರಿಗೆ ರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿ ಹಂಚಿ ಆದೇಶ

ನವೆಂಬರ್ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಸಚಿವರಿಗೆ ರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿ ಹಂಚಿ ಆದೇಶ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ನವೆಂಬರ್ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ, ಡಾ. ಅಶ್ವತ್ಥ್ ನಾರಾಯಣ-ರಾಮನಗರ, ಲಕ್ಷ್ಮಣ ಸವದಿ- ರಾಯಚೂರು, ಕೆ.ಎಸ್.ಈಶರಪ್ಪ-ಶಿವಮೊಗ್ಗ, ಆರ್.ಅಶೋಕ್-ಬೆಂ. ಗ್ರಾಮಾಂತರ,  ಜಗದೀಶ್ ಶೆಟ್ಟರ್- ಧಾರವಾಡ, ಬಿ.ಶ್ರೀರಾಮುಲು-ಚಿತ್ರದುರ್ಗ, ಎಸ್.ಸುರೇಶ್ ಕುಮಾರ್- ಚಾಮರಾಜನಗರ, ವಿ. ಸೋಮಣ್ಣ-ಕೊಡಗು, ಸಿ.ಟಿ.ರವಿ-ಚಿಕ್ಕಮಗಳೂರು, ಬಸವರಾಜ್ ಬೊಮ್ಮಾಯಿ-ಹಾವೇರಿ, ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ  ಜೆ.ಸಿ. ಮಾಧುಸ್ವಾಮಿ ಅವರಿಗೆ  ದ್ವಜಾರೋಹಣದ ಜವಾಬ್ದಾರಿ ನೀಡಲಾಗಿದೆ.

ಉಳಿದಂತೆ ಸಿ.ಸಿ. ಪಾಟೀಲ-ಗದಗ, ಎಚ್.ನಾಗೇಶ- ಕೋಲಾರ, ಪ್ರಭು ಚೌವ್ಹಾಣ್- ಬೀದರ, ಶಶಿಕಲಾ ಜೊಲ್ಲೆ- ವಿಜಯಪುರ, ಆನಂದ ಸಿಂಗ್- ಬಳ್ಳಾರಿ, ಬಿ.ಎ. ಬಸವರಾಜ್- ದಾವಣಗೆರೆ, ಎಸ್.ಟಿ. ಸೋಮಶೇಖರ- ಮೈಸೂರು, ಬಿ.ಸಿ. ಪಾಟೀಲ-ಕೊಪ್ಪಳ, ಡಾ.ಕೆ. ಸುಧಾಕರ- ಚಿಕ್ಕಬಳ್ಳಾಪುರ, ಕೆ.ಸಿ.  ನಾರಾಯಣಗೌಡ-ಮಂಡ್ಯ, ಅರಬೈಲ್ ಶಿವರಾಮ್ ಹೆಬ್ಬಾರ-ಉತ್ತರ ಕನ್ನಡ, ರಮೇಶ್ ಜಾರಕಿಹೊಳಿ-ಬೆಳಗಾವಿ, ಕೆ. ಗೋಪಾಲಯ್ಯ-ಹಾಸನ, ಶ್ರೀಮಂತ ಪಾಟೀಲ್- ಕಲಬುರ್ಗಿ, ಉಡುಪಿ ಹಾಗೂ ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.