ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ, ಹೆಚ್ಚಿದ ಆತಂಕ!
ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದ ಬೆನ್ನಲ್ಲೇ ನಾಗರಿಕ ಗುಂಪುಗಳು, ಮಾಜಿ ಕಾರ್ಪೋರೇಟರ್ ಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳ ಪುನರ್ ವಿಂಗಡಣೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದ ಬೆನ್ನಲ್ಲೇ ನಾಗರಿಕ ಗುಂಪುಗಳು, ಮಾಜಿ ಕಾರ್ಪೋರೇಟರ್ ಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
59 ವಾರ್ಡ್ ಗಳು 1 ಚದರ ಕಿಲೋ ಮೀಟರ್ ಗಿಂತಲೂ ಕಡಿಮೆಯಲ್ಲಿವೆ. ಅವರು ಪಟ್ಟಿಯನ್ನು ಬಿಬಿಎಂಪಿ ಪ್ರಧಾನ ಕಚೇರಿ ಮತ್ತು ಪುನರ್ ರಚನಾ ಸಮಿತಿಗೆ ಸಲ್ಲಿಸಲಿದ್ದಾರೆ ಎಂದು ಮಾಜಿ ಕಾರ್ಪೋರೇಟರ್ ಗಳು ಹೇಳುತ್ತಾರೆ.
ಈ ಪಟ್ಟಿಯಲ್ಲಿ 0.4 ಚದರ ಕಿ.ಮೀ ವಿಸ್ತಾರವಾದ ಶಿವಾಜಿನಗರ, 0.3 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಪಾದರಾಯನಪುರ, ಟಿ ದಾಸರಹಳ್ಳಿ, ಯಶವಂತಪುರ, ಮತಿಕೆರೆ ಇತ್ಯಾದಿ ವಾರ್ಡ್‌ಗಳಿವೆ.
ಕ್ಷೇತ್ರದಲ್ಲಿ ಸರಾಸರಿ 14 ಚದರ ಕಿ.ಮೀ ಗಾತ್ರದ ಎಂಟು ವಾರ್ಡ್‌ಗಳಿವೆ ಎಂದು ಮಹಾದೇವಪುರ ವಾರ್ಡ್ ಸಮಿತಿಗಳ ಸದಸ್ಯರು ಹೇಳುತ್ತಾರೆ. ಇಲ್ಲಿ 8 ರಿಂದ 12 ವಾರ್ಡ್ ಗಳಿಗೆ ಹೆಚ್ಚಿಸಲು ಸರ್ಕಾರ ಬಯಸಿದೆ. ಆದರೆ ಇದು 2021ರ ಜನ ಗಣತಿಯಂತೆ ಇನ್ನೂ 59 ವಾರ್ಡ್‌ಗಳಿಗೆ ಸಮನಾಗಿರುವುದಿಲ್ಲ. ಈ ಕ್ಷೇತ್ರ ವಿಸ್ತೀರ್ಣದಲ್ಲಿ ಚಿಕ್ಕದಾಗಿರುವುದಾಗಿ ಮಹಾದೇವಪುರದ ನಿವಾಸಿ ಮುರಳಿ ಹೇಳಿದರು.
ಸರ್ಕಾರವು ವೈಜ್ಞಾನಿಕ ವಿಧಾನವನ್ನು ಅನುಸರಿಸುತ್ತಿಲ್ಲ, ವಾರ್ಡ್ ಅನ್ನು ವಿಭಜಿಸುವ ವಿಧಾನ ಇನ್ನೂ ದೃಢಪಟ್ಟಿಲ್ಲ. ಸರ್ಕಾರದಿಂದ ಈ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎಂದು ಮಾಜಿ ಕಾರ್ಪೊರೇಟರ್ ಒಬ್ಬರು ತಿಳಿಸಿದರು.
ಇದು ಸ್ಪಷ್ಟವಾಗಿ ಬಿಬಿಎಂಪಿ ಚುನಾವಣೆಯನ್ನು ವಿಳಂಬಗೊಳಿಸುವ ತಂತ್ರವಾಗಿದೆ ಎಂದು ಆರೋಪಿಸಿದ ಅವರು, ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆ ಮುಗಿಯುವ ಹೊತ್ತಿಗೆ 2011 ರ ಜನಗಣತಿಯ ಅಂಕಿಅಂಶಗಳು ಇನ್ನು ಮುಂದೆ ಅನ್ವಯಿಸುವುದಿಲ್ಲ ಎಂದರು.
ವಾರ್ಡ್ ಪುನರ್ ವಿಂಗಡಣೆ ಸಂಬಂಧ ಇಲ್ಲಿಯವರೆಗೂ ಯಾವುದೇ ಸಭೆ ನಡೆದಿಲ್ಲ, ಕೆಲಸವೂ ಕೂಡಾ ಆರಂಭವಾಗಿಲ್ಲ ಎಂದು ಬಿಬಿಎಂಪಿ ಪುನರ್ ರಚನೆ ಜಂಟಿ ಶಾಸಕಾಂಗ ಸಮಿತಿ ಮುಖ್ಯಸ್ಥ ಶಾಸಕ ಎಸ್ ರಘು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


