30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ!: 8 ಕೋಟಿ ರೂ. ಹೂಡಿಕೆ ಗಳಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್!
ಕೇವಲ 30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ ನೀಡುವ ಸೌಲಭ್ಯವನ್ನು ಪರಿಚಯಿಸಿರುವ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಅಗ್ರಿಟೆಕ್ ಕೇಂದ್ರೀಕೃತ ಹೂಡಿಕೆದಾರರಿಗೆ ಬರೊಬ್ಬರಿ 8 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ.

ಹುಬ್ಬಳ್ಳಿ: ಕೇವಲ 30 ನಿಮಿಷಗಳಲ್ಲಿ ಮಣ್ಣು ಪರೀಕ್ಷೆ ಫಲಿತಾಂಶ ನೀಡುವ ಸೌಲಭ್ಯವನ್ನು ಪರಿಚಯಿಸಿರುವ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಅಗ್ರಿಟೆಕ್ ಕೇಂದ್ರೀಕೃತ ಹೂಡಿಕೆದಾರರಿಗೆ ಬರೊಬ್ಬರಿ 8 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸಿದೆ.
ಹೊಸದಾಗಿ ಪ್ರಾರಂಭವಾಗಿರುವ ಈ ಕಂಪನಿಯಿಂದ ರೈತರು ಕೇವಲ 30 ನಿಮಿಷಗಳಲ್ಲಿ ತಮ್ಮ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ನಡೆಸಬಹುದಾಗಿದ್ದು, ಫಲಿತಾಂಶದ ವಿವರಗಳನ್ನು ಅವರ ಮೊಬೈಲ್ ಗೇ ಕಳಿಸಲಾಗುತ್ತದೆ.
ಕೃಷಿ ಭೂಮಿಯಲ್ಲಿನ ಪೌಷ್ಟಿಕಾಂಶಗಳ ಬಗ್ಗೆ ರೈತರಿಗೆ ಅರಿವು ಇರಬೇಕಾಗುತ್ತದೆ. ಇಲ್ಲದೇ ಇದ್ದಲ್ಲಿ ಮಾಹಿತಿ ಇಲ್ಲದೇ ಹಾಕುವ ಗೊಬ್ಬರದಿಂದಾಗಿ ಇರುವ ಪೌಷ್ಟಿಕಾಂಶ ನಷ್ಟವಾಗುವುದರ ಜೊತೆಗೆ ಅಂತರ್ಜಲದ ಮೇಲೆಯೂ ಪರಿಣಾಮ ಬೀರಲಿದೆ. ಕೃಷಿ ಮಾಡುವವರ ಸಂಖ್ಯೆ 30 ಕೋಟಿ ಇದ್ದು, ದೇಶಾದ್ಯಂತ 4000 ಮಣ್ಣು ಪರೀಕ್ಷಾ ಲ್ಯಾಬರೇಟರಿಗಳಿವೆಯಷ್ಟೇ. ಇದರಿಂದಾಗಿ ಸಾಕಷ್ಟು ಅಸಮತೋಲನ ಉಂಟಾಗಿ ರೈತರಿಗೆ ಉಪಯೋಗವಾಗುತ್ತಿಲ್ಲ.
ಉಡುಪಿಯಲ್ಲಿ ಸಂದೀಪ್ ಕೊಂಡಾಜಿ ಎಂಬುವವರು ಕೃಷಿ ತಂತ್ರ ಎಂಬ ಸ್ಟಾರ್ಟ್ ಅಪ್ ಪ್ರಾರಂಭಿಸಿದ್ದು ಕೃಷಿ ರಾಸ್ತಾ ಎಂಬ ಕ್ಷಿಪ್ರ ಮಣ್ಣು ಪ್ರಯೋಗ ವಿಧಾನವನ್ನು ಪರಿಚಯಿಸಿದ್ದಾರೆ. ಇದರಿಂದಾಗಿ ಗೊಬ್ಬರದ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಹಾಕುವುದರಿಂದ ಕೃಷಿಕರು ಶೇ.15-25 ರಷ್ಟು ಹಣವನ್ನು ಉಳಿತಾಯ ಮಾಡಬಹುದಾಗಿದೆ ಎನ್ನುತ್ತಾರೆ ಸಂದೀಪ್ ಕೊಂಡಾಜಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


