ಗಂಧದ ಮರ ಕಳುವು ಮಾಡಲು ವೃದ್ಧನನ್ನೇ ಕೊಲೆಗೈದ ಶ್ರೀಗಂಧ ಕಳ್ಳರು
ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.

ಚಾಮರಾಜನಗರ: ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.
ಚಂದಕವಾಡಿ ಗ್ರಾಮದ ವೃದ್ಧ ಶಿವಬಸಪ್ಪ(75) ಕೊಲೆಯಾದವರು. ಮನೆ ಮುಂದೆ ಇದ್ದ ಶ್ರೀಗಂಧದ ಮರವನ್ಬು ಕದಿಯಲು ಬಂದಿದ್ದ ವೇಳೆ ಮನೆ ಹೊರಗಡೆ ಮಲಗಿದ್ದ ವೃದ್ಧ ಶಿವಬಸಪ್ಪನ ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.
ಶ್ವಾನದಳ ವೃದ್ಧನ ಮೃತದೇಹ ಪತ್ತೆ ಮಾಡಿದೆ. ಕಳ್ಳರು ಶ್ರೀಗಂಧದ ಮರವನ್ನು ಅರ್ಧ ಕತ್ತರಿಸಿ ಪರಾರಿಯಾಗಿದ್ದಾರೆ. ಚಾಮರಾಜನಗರ ನಗರದ ರಾಮಸಮುದ್ರ ಪೂರ್ವ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ಗುಳಿಪುರ ನಂದೀಶ .ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


