ಅತ್ತ ಎಲ್ಲರ ಕಣ್ಣು ಕೊರೋನಾ ಮೇಲೆ, ಇತ್ತ ಕ್ಷಯ ರೋಗದ ಪ್ರಕರಣ ಹೆಚ್ಚಳ!
ಸಾರ್ವಜನಿಕರು, ಸರ್ಕಾರ ಮತ್ತು ಮಾಧ್ಯಮಗಳು ಕೋವಿಡ್-19 ನತ್ತ ಗಮನ ಕೇಂದ್ರಿಕರಿಸಿದ್ದರೆ, ಇತ್ತ ಟ್ಯೂಬರ್ ಕ್ಯೂಲೊಸಿಸ್ -ಕ್ಷಯ ರೋಗ ಕೂಡಾ ಜನತೆಗೆ ಹೊಡೆತ ನೀಡುತ್ತಿದೆ. ಜನವರಿಯಿಂದ ಸೆಪ್ಟೆಂಬರ್ ವರೆಗೂ ರಾಜ್ಯದಲ್ಲಿ 45,839 ಕ್ಷಯ ಪ್ರಕರಣಗಳು ಕಂಡುಬಂದಿವೆ.

ಬೆಂಗಳೂರು: ಸಾರ್ವಜನಿಕರು, ಸರ್ಕಾರ ಮತ್ತು ಮಾಧ್ಯಮಗಳು ಕೋವಿಡ್-19 ನತ್ತ ಗಮನ ಕೇಂದ್ರಿಕರಿಸಿದ್ದರೆ, ಇತ್ತ ಟ್ಯೂಬರ್ ಕ್ಯೂಲೊಸಿಸ್ -ಕ್ಷಯ ರೋಗ ಕೂಡಾ ಜನತೆಗೆ ಹೊಡೆತ ನೀಡುತ್ತಿದೆ. ಜನವರಿಯಿಂದ ಸೆಪ್ಟೆಂಬರ್ ವರೆಗೂ ರಾಜ್ಯದಲ್ಲಿ 45,839 ಕ್ಷಯ ಪ್ರಕರಣಗಳು ಕಂಡುಬಂದಿವೆ.
ಮನೆ ಮನೆ ಬಾಗಿಲು ತಪಾಸಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವರದಿಯಾಗಿರುವ ಕೋವಿಡ್-19 ಸೋಂಕಿನ ವಾಸ್ತವ ಪ್ರಕರಣಗಳು ಹೆಚ್ಚಾಗಿದ್ದು, ಕ್ಷಯ ಪ್ರಕರಣಗಳು ಕಂಡುಬಂದಿವೆ.
45 ಸಾವಿರದ 839 ಟಿಬಿ ಪ್ರಕರಣಗಳ ಪೈಕಿಯಲ್ಲಿ 9, 212 ಸರ್ಕಾರಿ ಆಸ್ಪತ್ರೆಗಳು ಮತ್ತು 36, 628 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಂದ ವರದಿಯಾಗಿವೆ. ಕಳೆದ ವರ್ಷ ರಾಜ್ಯದಲ್ಲಿ 90, 176 ಪ್ರಕರಣಗಳು ಕಂಡುಬಂದಿದ್ದವು.
ಕ್ಷಯ ರೋಗ ಗುಣಪಡಿಸಬಹುದಾದ ಗಾಳಿಯಿಂದ ಹರಡುವ ಕಾಯಿಲೆಯಾಗಿದ್ದು, ಇದರಿಂದ ಶ್ವಾಸಕೋಸಕ್ಕೆ ಸಮಸ್ಯೆಯಾಗಲಿದೆ. ಎರಡು ವಾರಗಳಿಗಿಂತ ಹೆಚ್ಚಿನ ಕೆಮ್ಮು, ರಾತ್ರಿ ಬೆವರುವುದು, ಜ್ವರ, ಮತ್ತು ತೂಕ ಕಡಿಮೆಯಾಗುವುದು ಈ ಕಾಯಿಲೆಯ ಲಕ್ಷಣಗಳಾಗಿವೆ.
ಹೆಚ್ಚುವರಿ ಶ್ವಾಸಕೋಶದ ಕ್ಷಯವು ಹೊಟ್ಟೆ, ಮೂತ್ರಪಿಂಡ ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ ಇದುವರೆಗೂ 2, 634 ಕ್ಷಯ ರೋಗ ಸಂಬಂಧಿತ ಸಾವುಗಳು ರಾಜ್ಯದಲ್ಲಿ ಸಂಭವಿಸಿವೆ. ಕ್ಯಾನ್ಸರ್, ಹೆಚ್ ಐವಿ, ಡಯಾಬಿಟಿಸ್ ಮತ್ತಿತರ ಕಾಯಿಲೆಗಳಿಂದಲೂ ಸಾವನ್ನಪ್ಪಿರಬಹುದು.
ಕೆಮ್ಮು ಮತ್ತು ಜ್ವರ ಟಿಬಿ ಮತ್ತು ಕೋವಿಡ್-19 ರೋಗಿಗಳಲ್ಲಿ ಸಾಮಾನ್ಯ.ಆರೋಗ್ಯ ಸಿಬ್ಬಂದಿ ಮನೆ ಮನೆ ಬಾಗಿಲು ತಪಾಸಣೆಗೆ ತೆರಳಿದಾಗ ಜನರು ರೋಗ ಲಕ್ಷಣ ತಿಳಿಸಲು ಭಯ ಪಡುತ್ತಿದ್ದಾರೆ. ಇದೀಗ ಕೋವಿಡ್-19 ರೋಗಿಗಳಿಗೆ ತಪಾಸಣೆ, ಟಿಬಿ ಕಾಯಿಲೆಗಾಗಿ ಐಎಲ್ ಐ ಮತ್ತು ಸಾರಿ ಪ್ರಕರಣಗಳನ್ನು ತಪಾಸಣೆ ಮಾಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟ್ಯೂಬರ್ ಕ್ಯೂಲೊಸಿಸ್ ವಿಭಾಗದ ಜಂಟಿ ನಿರ್ದೇಶಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.
ರೋಗಲಕ್ಷಣವಿಲ್ಲದ ಕೋವಿಡ್-19 ರೋಗಿಗಳು ಚೇತರಿಸಿಕೊಳ್ಳಲು 14 ದಿನಗಳವರೆಗೆ ತೆಗೆದುಕೊಳ್ಳಲಿದೆ. ಆದರೆ, ಟಿಬಿ ಕನಿಷ್ಠ ಆರರಿಂದ ಎಂಟು ತಿಂಗಳುಗಳು ಮತ್ತು ಗರಿಷ್ಠ 1.5 ರಿಂದ 2 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


