ಇನ್ಸ್ಟಾಗ್ರಾಂನಲ್ಲಿ ಪ್ರೀತಿಯ ನಾಟಕವಾಡಿ ಯುವತಿಗೆ 2 ಲಕ್ಷ ರೂ. ವಂಚಿಸಿದ ಯುವಕ!
ಇನ್ ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಬೆಂಗಳೂರು: ಇನ್ ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ 2 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ಪಾಂಡಿಚೇರಿ ಮೂಲದ ಕಾರ್ತಿಕ್ ವಂಚಕ. ಆತನ ವಿರುದ್ಧ ವಂಚನೆಗೊಳಗಾದ ಯುವತಿ ದೂರು ನೀಡಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಎ.ನಾರಾಯಣಪುರದ ಯುವತಿಗೆ ಕಳೆದ 2017ರಲ್ಲಿ ಇನ್ ಸ್ಟಾಗ್ರಾಂ ಮೂಲಕ ಪರಿಚಯವಾದ ಕಾರ್ತಿಕ್, ಮೊಬೈಲ್ ನಂಬರ್ ತೆಗೆದುಕೊಂಡು ವ್ಯಾಟ್ಸ್ ಆ್ಯಪ್ನಲ್ಲಿ ಮಾತುಕತೆ ನಡೆಸುತ್ತಿದ್ದ. 2018ರಲ್ಲಿ ಶಾಪಿಂಗ್ ಮಾಲ್ ವೊಂದರಲ್ಲಿ ಇಬ್ಬರು ಭೇಟಿ ಕೂಡ ಆಗಿದ್ದರು. ಆ ವೇಳೆ ಯುವಕ ತಾನು ಯೂನಿಟ್ ಇನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿ ಇದೆ ಎಂದು ಹೇಳೀಕೊಂಡಿದ್ದ, ಇದಾಗಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಯುವಕ ಸರಿ ಸುಮಾರು ಮೂರು ತಿಂಗಳಿಗೊಮ್ಮೆ ಬೆಂಗಳೂರಿಗೆ ಆಗಮಿಸಿ ಯುವತಿಯನ್ನು ಭೇಟಿ ಮಾಡುತ್ತಿದ್ದ.
ಈ ನಡುವೆ ತಾನು ಭೇಟಿಗಾಗಿ ಬಂದಾಗಲೆಲ್ಲಾ ಸ್ವಲ್ಪ ಸ್ವಲ್ಪ ಹಣ ಅಥವಾ ಚಿನ್ನವನ್ನು ಕೊಂಡೊಯ್ದಿದ್ದ. ಹೋಗೆ ಒಟ್ಟಾರೆ ಎರಡು ಲಕ್ಷ ನಗದು ಹಾಗೂ ೬ ಗ್ರಾಂ ಚಿನ್ನದ ಉಂಗುರ ತೆಗೆದುಕೊಂಡು ಹೋಗಿದ್ದಾಗಿ ಯುವತಿ ಆರೋಪಿಸಿದ್ದಾಳೆ.
ಇದಲ್ಲದೆ "ತಾವಿಬ್ಬರೂ ಮದುವೆಯಾಗಲು ನಮ್ಮ ಮನೆಯಲ್ಲಿ ಒಪ್ಪಿಲ್ಲ ಎಂದು ಕಾರಣ ನಿಡಿದ್ದ ಮಾತ್ರವಲ್ಲದೆ ಖಾಸಗಿ ಫೋಟೋ ಸಾಮಾಜಿಕ ತಾಣಗಳಲ್ಲಿ ಅಪ್ ಮಾಡುವುದಾಗಿ ಬೆದಎರಿಕೆಯನ್ನೂ ಹಾಕಿದ್ದಾನೆ,. ಇತ್ತೀಚೆಗೆ ಆತನ ಸಂಪರ್ಕ ಸಿಕ್ಕುತ್ತಿಲ್ಲ" ಎಂದು ನೊಂದ ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಸಧ್ಯ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


