ಸುಮಲತಾ ಅವರಿಗೆ ನಾಗರಹಾವು ಚಿತ್ರದ ಜಲೀಲನ ಪಾತ್ರ ನೆನಪಾಗಿರಬೇಕು: ಸಂಸದ ಪ್ರತಾಪ ಸಿಂಹ ತಿರುಗೇಟು
ಸಂಸದರಾದ ಪ್ರತಾಪ ಸಿಂಹ ಮತ್ತು ಸುಮಲತಾ ಅಂಬರೀಷ್ ಮಧ್ಯೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.

ಮೈಸೂರು: ಸಂಸದರಾದ ಪ್ರತಾಪ ಸಿಂಹ ಮತ್ತು ಸುಮಲತಾ ಅಂಬರೀಷ್ ಮಧ್ಯೆ ಆರೋಪ-ಪ್ರತ್ಯಾರೋಪ ಮುಂದುವರಿದಿದೆ.
ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಏನೂ ಕೆಲಸ ಮಾಡುತ್ತಿಲ್ಲ ಎಂದು ಅಧಿಕಾರಿಗಳೊಂದಿಗೆ ಪ್ರತಾಪ ಸಿಂಹ ದೂರವಾಣಿಯಲ್ಲಿ ಮಾತನಾಡುವಾಗ ಹೇಳಿರುವ ಮಾತುಗಳನ್ನೊಳಗೊಂಡ ವಿಡಿಯೊ ವ್ಯಾಪಕ ವೈರಲ್ ಆಗಿತ್ತು.
ಅದಕ್ಕೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾಗ ಸಂಸದೆ ಸುಮಲತಾ, ಪ್ರತಾಪ ಸಿಂಹ ಪೇಟೆರೌಡಿ ತರ ಮಾನಾಡುತ್ತಾರೆ, ಅವರ ಮಾತುಗಳಿಗೆ ಹೆಚ್ಚು ಬೆಲೆ ಕೊಡುವ ಅಗತ್ಯವಿಲ್ಲ, ನಾನೇನು ಕೆಲಸ ಮಾಡುತ್ತೇನೆ ಎಂದು ಕ್ಷೇತ್ರದ ಜನತೆಗೆ ಗೊತ್ತಾದರೆ ಸಾಕು ಎಂದಿದ್ದರು.
ಅದರ ಕುರಿತಂತೆ ನಿನ್ನೆ ಸಂಸದ ಪ್ರತಾಪ ಸಿಂಹ ಅವರಲ್ಲಿ ಪತ್ರಕರ್ತರು ಮತ್ತೆ ಪ್ರಶ್ನೆ ಕೇಳಿದ್ದರು, ಅದಕ್ಕೆ ಪ್ರತಾಪ ಸಿಂಹ, ಸುಮಲತಾ ಅವರು ಹೇಳಿಕೇಳಿ ಸಿನೆಮಾ ಮಂದಿ, ಕಲಾವಿದರು, ಅವರಿಗೆ ನಾಗರಹಾವು ಸಿನಿಮಾದ ಜಲೀಲ ಪಾತ್ರ ನೆನಪಾಗಿ ಡೈಲಾಗ್ ಹೊಡೆದಿರಬೇಕು, ಅಂತಹ ಮಾತುಗಳಿಗೆ ನೀವು ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದಿದ್ದರು.
ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರೂ ಆಗಬಹುದು, ನಮ್ಮ ಕುಟುಂಬವಷ್ಟೆ ಅಧಿಕಾರಕ್ಕೆ ಬರಬೇಕು ಎಂಬುದು ಪಾಳೇಗಾರಿಕೆ ಸಂಸ್ಕೃತಿ. ಇಂತಹ ಸಂಸ್ಕೃತಿಗೆ ಜನತಂತ್ರದಲ್ಲಿ ಜಾಗವಿಲ್ಲ, ಮಂಡ್ಯ ಕ್ಷೇತ್ರದ ಯಲಿಯೂರಿನ ಜನರು ತಮಗೆ ಅಂಡರ್ ಪಾಸ್ ಬೇಕು ಎಂದು ಕೇಳಿದರು, ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಎಲ್ಲೆಲ್ಲಿ ಅಂಡರ್ ಪಾಸ್, ಮೇಲ್ಸೇತುವೆ ಬೇಕು ಎಂಬ ಪ್ರಸ್ತಾವ ಕೊಡಿ ಎಂದು ಸುಮಲತಾ ಅವರನ್ನು ಕೇಳಿದೆ, ಇದರಲ್ಲೇನು ತಪ್ಪಿದೆ, ನಾನು ಯಾವ ಸ್ಟಾರೂ ಅಲ್ಲ, ನನಗೆ ಮತ ಹಾಕಲು ಯಾವ ಅಭಿಮಾನಿಗಳೂ ಇಲ್ಲ, ನನಗೆ ನನ್ನ ಕೆಲಸವೇ ಶ್ರೀರಕ್ಷೆ ಎಂದು ಪ್ರತಾಪ ಸಿಂಹ ಸುಮಲತಾ ಅವರಿಗೆ ತಿರುಗೇಟು ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


