ಬೆಂಗಳೂರು: ಪಟಾಕಿ ಸಿಡಿತದಿಂದ ಕಣ್ಣಿನ ಗಾಯವಾದರ ಸಂಖ್ಯೆಯಲ್ಲಿ ತೀವ್ರ ಇಳಿಕೆ
ಈ ವರ್ಷ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣು ಗಾಯಗೊಂಡವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಮಿಟೋ ವರ್ಷ ಪ್ರತಿ ವರ್ಷ ಏನಿಲ್ಲವೆಂದರೂ 30ಕ್ಕೂ ಇಂತಹ ಪ್ರಕರಣಗಳನ್ನು ನೋಡಬಹುದಾಗಿತ್ತು. ಆದರೆ, ಈ ವರ್ಷದ ದೀಪಾವಳಿಯ ಎರಡನೇ ದಿನ ಕೇವಲ ಮೂವರು ಬಾಲಕರು ಗಾಯಗೊಂಡಿದ್ದಾರೆ.

ಬೆಂಗಳೂರು: ಈ ವರ್ಷ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣು ಗಾಯಗೊಂಡವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಮಿಟೋ ವರ್ಷ ಪ್ರತಿ ವರ್ಷ ಏನಿಲ್ಲವೆಂದರೂ 30ಕ್ಕೂ ಇಂತಹ ಪ್ರಕರಣಗಳನ್ನು ನೋಡಬಹುದಾಗಿತ್ತು. ಆದರೆ, ಈ ವರ್ಷದ ದೀಪಾವಳಿಯ ಎರಡನೇ ದಿನ ಕೇವಲ ಮೂವರು ಬಾಲಕರು ಗಾಯಗೊಂಡಿದ್ದಾರೆ.
ಮೊದಲ ಪ್ರಕರಣದಲ್ಲಿ, ವಿಜಯನಗರದ 12 ವರ್ಷದ ಬಾಲಕನೊಬ್ಬ ಹೂ ಕುಂಡ ಪಟಾಕಿಯಿಂದ ಗಾಯಗೊಂಡಿದ್ದು, ಆತನ ಮೂಗು ಹಾಗೂ ಕಣ್ಣುರೆಪ್ಪೆಗಳಿಗೆ ಸುಟ್ಟ ಗಾಯಗಳಾಗಿವೆ. ಆತನ ಕಣ್ಣಿನ ಗುಡ್ಡೆಗೆ ಗಾಯವಾಗಿದ್ದು, ಕಣ್ಣಿನ ಗಾಯದ ಬಗ್ಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ದೃಷ್ಟಿಗೆ ತೊಂದರೆಯಾಗುವ ಯಾವುದೇ ಕೇಂದ್ರ ಗುರುತುಗಳುಗಳಿಲ್ಲ ಎಂದು ಭಾವಿಸಿರುವುದಾಗಿ ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ ಸಂಪಿಗೆ ಹಳ್ಳಿ ಲೇಔಟ್ ನ 13 ವರ್ಷದ ಬಾಲಕನೊಬ್ಬನಿಗೆ ಪಟಾಕಿಯಿಂದ ಗಾಯವಾಗಿದೆ. ಮೂರನೇ ಪ್ರಕರಣದಲ್ಲಿ ಮಾಗಡಿ ರಸ್ತೆಯ 4 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ.
ನಾರಾಯಣ ನೇತ್ರಾಲಯದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ ಇವುಗಳೆಲ್ಲವೂ ಚಿಕ್ಕ ಗಾಯಗಳಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಆಪೊಲೋ ಆಸ್ಪತ್ರೆಗೆ ಇಂತಹ ಎರಡು ಪ್ರಕರಣಗಳು ಬಂದಿರುವುದಾಗಿ ನೇತ್ರಶಾಸ್ತ್ರ ಸಮಾಲೋಚಕ ಡಾ. ರಘು ನಾಗರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


