ರಾಜ್ಯ

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿ ಚಾಕು ಇರಿತ

ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿಯೋರ್ವ ಚಾಕು ಇರಿದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿ ಚಾಕು ಇರಿತ
ಆರೋಪಿ ಗಗನ್
Published On :

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಭಗ್ನ ಪ್ರೇಮಿಯೋರ್ವ ಚಾಕು ಇರಿದು, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಯುವತಿಗೆ ಚಾಕು ಇರಿದ ನಂತರ ಆರೋಪಿ ಗಗನ್ ಲಕ್ಷ್ಮೀಪುರಂ ಪೊಲೀಸ್ ಠಾಣೆ ಪೊಲೀಸರ ಮುಂದೆ ಶರಣಾಗತಾಗಿದ್ದಾನೆ.

ಕಳೆದ  5 ವರ್ಷಗಳಿಂದ ಓರ್ವಯುವತಿಯನ್ನು  ಪ್ರೀತಿಸುತ್ತಿದ್ದ ಗಗನ್  ಆಕೆಗೆ 18  ವರ್ಷವಾದಾಗ ಅವಳನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಆಕೆ ತಾನು ಯುವಕನನ್ನು ಮದುವೆಯಾಗುದಕ್ಕೆ ನಿರಾಕರಿಸಿದ್ದಾಳೆ.  ಅಲ್ಲದೆ ಯುವತಿಯ ಪೋಷಕರೂ ಸಹ ಗಗನ್ ಗೆ ಎಚ್ಚರಿಕೆ ನೀಡಿದ್ದಾರೆ.ಇದರಿಂದ ಬೇಸರ ಹಾಗೂ ಉದ್ರಿಕ್ತಗೊಂಡ ಗಗನ್ ಇಂದು ಆಕೆಗೆ ಚಾಕು ಇರಿದು ನಂತರ ಪೋಲೀಸರಿಗೆ ಶರಣಗಿದ್ದಾನೆ,

ಇತ್ತ ಚಾಕು ಇರಿತಕ್ಕೊಳಗಾಗಿ ಗಾಯಗೊಂಡ ಯುವತಿ  ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ  ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.