ಯುಎಇಗೆ ತೆರಳಲು ಮುಂದಾಗಿದ್ದ ಬಿ.ಆರ್. ಶೆಟ್ಟಿಗೆ ವಿಮಾನ ನಿಲ್ದಾಣದಲ್ಲಿ ತಡೆ ಒಡ್ಡಿದ ವಲಸೆ ಅಧಿಕಾರಿಗಳು
ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ.

ಬೆಂಗಳೂರು: ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ.
ಶೆಟ್ಟಿ ಅವರು ಇತ್ತಿಹಾದ್ ವಿಮಾನದಲ್ಲಿ ಯುಎಇಗೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಬಿ.ಆರ್. ಶೆಟ್ಟಿ ಮತ್ತು ಅವರ ಕಂಪನಿಗಳು ಹಣಕಾಸಿನ ಅಕ್ರಮ ಹಾಗೂ ಶತಕೋಟಿ ಡಾಲರ್ ವಂಚನೆ ವೆಸಗಿದ ಆರೋಪ ಎದುರಿಸುತ್ತಿದೆ.
ಇತ್ತಿಹಾದ್ ಇವೈ 217 ವಿಮಾನ ಮೂಲಕ ಅಬುಧಾಬಿಗೆ ತೆರಳಲು ಅವರು ಮಾಡಿದ ಪ್ರಯತ್ನ ವಿಫಲವಾಗಿದೆ. ಯುಎಇಗೆ ಹಿಂದಿರುಗುವ ಭರವಸೆ ನೀಡಿದ್ದೆ. ಈ ಭರವಸೆಯ ಈಡೇರಿಕೆಗಾಗಿ ಅಲ್ಲಿಗೆ ತೆರಳಿದ್ದೆ. ತಮಗೆ ಯುಎಇಯ ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


