ದೀಪಾವಳಿ ಹಬ್ಬದ ರಜೆ: ಬಸ್ ಗಳಿಗೆ ಹೆಚ್ಚಿದ ಬೇಡಿಕೆ
ಕೊರೋನಾ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ಆನ್ ಲೈನ್ ಟಿಕೆಟ್ ಪ್ಲಾಟ್ ಫಾರ್ಮ್ ನ ರೆಡ್ ಬಸ್ ನಲ್ಲಿ ಕಳೆದ ಎರಡು ವಾರಗಳಿಂದ ಬುಕ್ಕಿಂಗ್ ಆರಂಭವಾಗಿದೆ.

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ಆನ್ ಲೈನ್ ಟಿಕೆಟ್ ಪ್ಲಾಟ್ ಫಾರ್ಮ್ ನ ರೆಡ್ ಬಸ್ ನಲ್ಲಿ ಕಳೆದ ಎರಡು ವಾರಗಳಿಂದ ಬುಕ್ಕಿಂಗ್ ಆರಂಭವಾಗಿದೆ.
ನವೆಂಬರ್ 14ರಂದು ದೀಪಾವಳಿ ಹಬ್ಬ ಇರುವ ಕಾರಣ ಅಂತರರಾಜ್ಯ ಪ್ರಯಾಣಕ್ಕಾಗಿ ಶೇ,60 ರಷ್ಟು ಬುಕ್ಕಿಂಗ್ ನಡೆದಿದೆ. ಇದರಲ್ಲಿ ಶೇ. 58 ರಷ್ಟು ಹವಾನಿಯಂತ್ರಿತ ಬಸ್ ಗಳಿಗೆ ಬುಕ್ಕಿಂಗ್ ಆಗಿದೆ.
ರೆಡ್ ಬಸ್ ನಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬುಕ್ಕಿಂಗ್ ನಡೆದಿದೆ.
1,900 ಖಾಸಗಗಿ ಬಸ್ ಗಳು 17 ರಾಜ್ಯಗಳ ಪ್ರಾದೇಶಿಕ ಸಾರಿಗೆ ನಿಗಮಗಳು ಹಬ್ಬದ ಸೀಸನ್ ಗಾಗಿ ಪ್ರತಿದಿನ 40 ಸಾವಿರ ಪ್ರಯಾಣ ಸೇವೆ 39 ಲಕ್ಷ ಪ್ರಯಾಣಿಕರಿಗಾಗಿ ಮಾಡಿದ್ದು, ದೀಪಾವಳಿ ಹಬ್ಬದ ವಾರದಲ್ಲಿ 47 ಕೋಟಿ ಕಿಮೀ ಸಂಚಾರಕ್ಕೆ ಅನುವು ಮಾಡಲಾಗಿದೆ.
ಇದರಲ್ಲಿ ಪ್ರಮುಖವಾಗಿ ಬೆಂಗಳೂರು- ಹೈದರಾಬಾದ್, ಬೆಂಗಳೂರು-ಕಲಬುರಗಿ, ಮತ್ತು ಬೆಂಗಳೂರು-ವಿಜಯಪುರ ಮುಖ್ಯ ಮಾರ್ಗಗಳಾಗಿವೆ.
ದೇಶದಲ್ಲಿ ಬುಕ್ ಮಾಡಲಾದ ಅತಿ ಕಡಿಮೆ ಇಂಟರ್ಸಿಟಿ ಬಸ್ ಮಾರ್ಗವು ಅಸ್ಸಾಂನ ಗುವಾಹಟಿ ಮತ್ತು ಮಖೋವಾ ನಡುವೆ 20 ನಿಮಿಷಗಳಲ್ಲಿ 4.9 ಕಿ.ಮೀ ದೂರವನ್ನು ಹೊಂದಿದೆ ಮತ್ತು ಅತಿ ಉದ್ದವಾದ ಜೋಧ್ಪುರ್ (ರಾಜಸ್ಥಾನ) ಮತ್ತು ಮೈಸೂರು (ಕರ್ನಾಟಕ) ಮಾರ್ಗದ ಪ್ರಯಾಣವಾಗಿದೆ. 1, 965 ಕಿಮೀ ಅಂತರ ಕ್ರಮಿಸಲು 38 ಗಂಟೆ ಸಮಯ ಬೇಕಾಗಿದೆ.
ಪಾಟ್ನಾ-ಕೋಲ್ಕತಾ, ಬಲ್ಲಿಯಾ-ಲಕ್ನೋ, ಪಲಸಾ-ವಿಶಾಖಪಟ್ಟಣಂ, ಬೆರ್ಹಾಂಪೋರ್-ಕೋಲ್ಕತಾ ಮತ್ತು ಭುವನೇಶ್ವರ-ಕೋಲ್ಕತಾ ದೇಶಗಳಲ್ಲಿ ಜನಪ್ರಿಯ ರೈಲು ಮಾರ್ಗಗಳಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


