ರಾಜ್ಯ

ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಹೊರರಾಜ್ಯಗಳಿಂದ ಬರುವವರಿಂದ ಸ್ವಲ್ಪ ಹೆಚ್ಚಿದೆ: ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಕೊರೋನಾ ಸಾಕಷ್ಟು ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಮತ್ತಿತರ ಹೊರರಾಜ್ಯ ಗಳಿಂದ ಬರುತ್ತಿರುವವರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ, ಹೊರರಾಜ್ಯಗಳಿಂದ ಬರುವವರಿಂದ ಸ್ವಲ್ಪ ಹೆಚ್ಚಿದೆ: ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ (ಸಂಗ್ರಹ ಚಿತ್ರ)
Published On :

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಕಷ್ಟು ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಮತ್ತಿತರ ಹೊರರಾಜ್ಯ ಗಳಿಂದ ಬರುತ್ತಿರುವವರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಕೋವಿಡ್ ಪರೀಕ್ಷೆಗೆ ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಪರೀಕ್ಷಾ ಘಟಕಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸಾಕಷ್ಟು ನಿಯಂತ್ರಣದಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಹೊರರಾಜ್ಯಗಳಿಂದ ಬರುವವರಿಂದ ಕೋವಿಡ್ ಇಲ್ಲಿ ಸಾಕಷ್ಟು ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ನಿಯಂತ್ರಣ ವಿಚಾರದಲ್ಲಿ ನಮ್ಮದೇ ಆದಂತಹ ಆರೋಗ್ಯ ಸೇವೆಗಳ ನಿಯಂತ್ರಣ ವಿಧಾನವನ್ನು ಅನುಸರಿಸಿ ಯಶಸ್ವಿಯಾಗಿದೆ ಎಂದರು.

ನಿಯಂತ್ರಣ ಕಾರ್ಯದ ಜೊತೆಗೆ ಕೋವಿಡ್ ಸೋಂಕಿತರನ್ನು ತಪಾಸಣೆಗೆ ಒಳಪಡಿಸುವ ವಿಚಾರದಲ್ಲಿ ನಮ್ಮ ಸಾಧನೆ ಉತ್ತಮವಾಗಿದೆ. ಜನಸಂಖ್ಯೆ ಆಧಾರಗಳ ಮೇಲೆ ಈ ಸ್ಮಾರ್ಟ್ ಕಿಯೋಸ್ಕ್ ಗಳನ್ನ 15 ಕಡೆ ಸ್ಥಾಪನೆ ಮಾಡಲಿದ್ದೇವೆ. ಇದರಿಂದ ಹೆಚ್ಚು ಪರೀಕ್ಷೆ ಮಾಡಲು ಅನುಕೂಲವಾಗಲಿದೆ. ಸರ್ಕಾರದ ಜತೆ ಕೈ ಜೋಡಿಸಿ ಸ್ಮಾರ್ಟ್ ಕಿಯೋಸ್ಕ್ ಇತರ ಖಾಸಗಿ ಕಂಪನಿಗಳಿಗೆ ಮಾದರಿಯಾಗಿದೆ. ನಾವು ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ. ಬೆಂಗಳೂರು ಕೊರೋನಾ ತಡೆಗಟ್ಡುವಲ್ಲಿ ಯಶಸ್ವಿಯಾಗಿದೆ ಅಂತ ಕೇಂದ್ರ ಸರ್ಕಾರವೇ ಹೇಳಿದೆ ಎಂದಿದ್ದಾರೆ.

ಡಿಸಿಎಂ ಡಾ ಅಶ್ವಥ್ ನಾರಾಯಣ ಮಾತನಾಡಿ, ವಿಪ್ರೋ ಸಂಸ್ಥೆಯ ಸಹಯೋಗದೊಂದಿಗೆ ಸ್ಮಾರ್ಟ್ ಕಿಯೋಸ್ಕ್ ಗಳು ಕಾರ್ಯ ನಿರ್ವಹಣೆ ಮಾಡಲಿದೆ. 15 ಸ್ಮಾರ್ಟ್ ಕಿಯೋಸ್ಕ್ ಗಳ ಉದ್ಘಾಟನೆ ಆಗಿದೆ. ಸ್ಯಾಂಪಲ್ ಕಲೆಕ್ಷನ್ ಮಾಡೋದು ದೊಡ್ಡ ಸವಾಲಾಗಿತ್ತು. ಈ ಕಿಯೋಸ್ಕ್ ಮೂಲಕ ವೈದ್ಯರು, ಪೆಷೆಂಟ್ ಪರಸ್ಪರ ಸಂಪರ್ಕ ಬರದೇ ಸ್ಯಾಂಪಲ್ ಕಲೆಕ್ಷನ್ ಮಾಡಬಹುದು. ಎಲ್ಲಿ ಬೇಕಾದರೂ ಕಿಯೋಸ್ಕ್‌ಗಳನ್ನ ಬಳಸಬಹುದು. ಕಿಯೋಸ್ಕ್‌ಗಳ ಮೂಲಕ ಸರಳ ಮತ್ತು ಸುಲಭವಾಗಿ ಸ್ಯಾಂಪಲ್ ಕಲೆಕ್ಟ್ ಮಾಡಿಕೊಳ್ಳಬಹುದು ಎಂದರು.

ಸ್ಮಾರ್ಟ್ ಕಿಯೋಸ್ಕ್ ಗಳನ್ನ 15 ಕಡೆ ಸ್ಥಾಪನೆ ಮಾಡಲಿದ್ದೇವೆ. ಇದರಿಂದ ಹೆಚ್ಚು ಪರೀಕ್ಷೆ ಮಾಡಲು ಅನುಕೂಲವಾಗಲಿದೆ. ಸರ್ಕಾರದ ಜತೆ ಕೈ ಜೋಡಿಸಿ ಸ್ಮಾರ್ಟ್ ಕಿಯೋಸ್ಕ್ ಇತರ ಖಾಸಗಿ ಕಂಪನಿಗಳಿಗೆ ಮಾದರಿಯಾಗಿದೆ. ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ ಎಂದರು.

ವೈರಸ್ ನಮ್ಮನ್ನ ಬಿಟ್ಟು ಹೋಗೋದಿಲ್ಲ. ಶಾಶ್ವತವಾಗಿ ನಮ್ಮ ಜೊತೆಯಲ್ಲೆ ಉಳಿದುಕೊಳ್ಳಲಿದೆ. ಜನರು ಎಚ್ಚರಿಕೆಯಿಂದಿರಬೇಕು. ವೈರಸ್ ಎದುರಿಸೋಕೆ ನಾವು ಸಜ್ಜಾಗಿದ್ದೇವೆ. ಯಾವುದೇ ಆತಂಕ ಇಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.