ರಾಜ್ಯ

ಹಣಕಾಸಿನ ತೊಂದರೆ, ಜೀವನದಲ್ಲಿ ಜುಗುಪ್ಸೆ: ರಾಮಮೂರ್ತಿನಗರದಲ್ಲಿ ಇಬ್ಬರ ಆತ್ಮಹತ್ಯೆ

ಟೆಕ್ಕಿಯೊಬ್ಬರು 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಮೃತಪಟ್ಟವರನ್ನು ಉತ್ತಮ್ ಹೆಗಡೆ (30) ಎಂದು ಗುರುತಿಸಲಾಗಿದೆ.

ಹಣಕಾಸಿನ ತೊಂದರೆ, ಜೀವನದಲ್ಲಿ ಜುಗುಪ್ಸೆ: ರಾಮಮೂರ್ತಿನಗರದಲ್ಲಿ ಇಬ್ಬರ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಟೆಕ್ಕಿಯೊಬ್ಬರು 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಮೃತಪಟ್ಟವರನ್ನು ಉತ್ತಮ್ ಹೆಗಡೆ (30) ಎಂದು ಗುರುತಿಸಲಾಗಿದೆ. 

ಬೆನ್ನಿಗಾನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅವರು ಗುರುವಾರ ಮುಂಜಾನೆ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ."ಉತ್ತಮ್ ಹೆಗಡೆ ಕುಟುಂಬದ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಕುಟುಂಬದವರ ಜೊತೆಗೆ ಊಟ ಮಾಡಿದ್ದರು. ನಂತರ ಎಲ್ಲರೂ ಮಲಗಿದ್ದಾರೆ" ಎಂದು ರಾಮಮೂರ್ತಿ ನಗರ ಪೊಲೀಸರು ಹೇಳಿದ್ದಾರೆ.

"ಮುಂಜಾನೆ ಉತ್ತಮ್ ಹೆಗಡೆ ಕೊಠಡಿಯಿಂದ ಹೊರ ಬಂದಿದ್ದರು. 4ನೇ ಮಹಡಿಯಿಂದ ಬಿದ್ದು ಅವರು ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ. 

ಮತ್ತೊಂದು ಪ್ರಕರಣದಲ್ಲಿ  34 ವರ್ಷದ ಕ್ಯಾಬ್ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೆ ಮಣಿ ಮೃತ ದುರ್ದೈವಿ, ಹಣಕಾಸಿನ ಮುಗ್ಗಟ್ಟು ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿದ್ದಾನೆ. 34 ವರ್ಷದ ಈತ ಆರ್ಥಿಕ ಮುಗ್ಗಟ್ಟಿಗಾಗಿ ಸಾವಿಗೆ ಶರಣಾಗಿದ್ದಾನೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಮಣಿ ಪತ್ನಿ ತವರಿಗೆ ತೆರಳಿದ್ದಳು. ಮನೆಗೆ ಬಂದ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.