ಆರು ದಶಕದ ದಾಂಪತ್ಯ ಜೀವನ ನಡೆಸಿ ಸಾವಲ್ಲೂ ಒಂದಾದ ಜೀವಿಗಳು
ಆರು ದಶಕಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ ಮನೆ ತುಂಬಾ ಮಕ್ಕಳು, ಮರಿ, ಮೊಮ್ಮಕ್ಕಳನ್ನು ಕಂಡಿದ್ದ ಇಬ್ಬರು ಸಾವಲ್ಲೂ ಒಂದಾಗಿ ಅರ್ಥಕತೆ ಮೆರೆದ ಬಘಟನೆ ಕನಕಗಿರಿಯಲ್ಲಿ ನಡೆದಿದೆ.

ಗಂಗಾವತಿ: ಆರು ದಶಕಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ ಮನೆ ತುಂಬಾ ಮಕ್ಕಳು, ಮರಿ, ಮೊಮ್ಮಕ್ಕಳನ್ನು ಕಂಡಿದ್ದ ಇಬ್ಬರು ಸಾವಲ್ಲೂ ಒಂದಾಗಿ ಅರ್ಥಕತೆ ಮೆರೆದ ಬಘಟನೆ ಕನಕಗಿರಿಯಲ್ಲಿ ನಡೆದಿದೆ.
ಕನಕಗಿರಿ ಪಟ್ಟಣದ ಮಂಡಳ ಪಂಚಾಯತಿಯ ಮಾಜಿ ಚೇರ್ಮನ್ ಜಂಗಮ ಸಮಾಜದ ಮುಖಂಡ ಕೆ. ಮಹಾಬಳೇಶ್ವರ ಸ್ವಾಮಿ ಹಾಗೂ ಅವರ ಪತ್ನಿ ಪ್ರಭಾವತಿ ಒಂದೇ ದಿನದಲ್ಲಿ ಸಾವನ್ನಪ್ಪಿದ್ದಾರೆ.
ಈ ಮೂಲಕ ಆದರ್ಶ ಜೀವನ ನಡೆಸಿದ ಈ ಇಬ್ಬರು, ಒಂದೇ ದಿನಕ್ಕೆ ಇಹಲೋಕ ತ್ಯಜಿಸಿರುವುದು ಕುಟುಂಬ ವರ್ಗವನ್ನು ಶೋಕದ ಕಡಲಲ್ಲಿ ಮುಳುಗುವಂತೆ ಮಾಡಿದೆ.
ನಸುಕಿನ ಜಾವ ಹನ್ನೆರಡುವರೆಗೆ ಪತ್ನಿ ಪ್ರಭಾವತಿ (78) ಹೃದಯಾಘಾತದಿಂದ ಸಾವನ್ನಪ್ಪಿದರು. ಬೆಳಗ್ಗೆ ಐದುವರೆಗೆ ಪತ್ನಿ ವಿಯೋಗದ ಸುದ್ದಿ ತಿಳಿದ ಮಹಾಬಳೇಶ್ವರ ಸ್ವಾಮಿ (86) ಕೂಡ ಕುಸಿದು ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ವರದಿ: ಶ್ರೀನಿವಾಸ್ ಎಂ ಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


