ರಾಜ್ಯ

ಶಿವಮೊಗ್ಗ: ತಾಯಿಯ ಶವದೊಂದಿಗೆ 5 ದಿನ ಕಳೆದ ಮಗಳು, ಅಸಹಾಯಕ ಕಣ್ಣೀರು!

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ ಆಹಾರವಿಲ್ಲದೆ ಜನರು, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ಶಿವಮೊಗ್ಗದಲ್ಲಿ ತಾಯಿ ತೀರಿಕೊಂಡು ಐದು ದಿನ ಕಳೆದರೂ ಏನು ಮಾಡಲು ಗೊತ್ತಾಗದೆ ಮಗಳು ಐದು ದಿನ ಶವದೊಂದಿಗೆ ಕಾಲ ಕಳೆದಿದ್ದಾಳೆ.

ಶಿವಮೊಗ್ಗ: ತಾಯಿಯ ಶವದೊಂದಿಗೆ 5 ದಿನ ಕಳೆದ ಮಗಳು, ಅಸಹಾಯಕ ಕಣ್ಣೀರು!
ಸಂಗ್ರಹ ಚಿತ್ರ
Published On :

ಶಿವಮೊಗ್ಗ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅನ್ನ ಆಹಾರವಿಲ್ಲದೆ ಜನರು, ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು ಶಿವಮೊಗ್ಗದಲ್ಲಿ ತಾಯಿ ತೀರಿಕೊಂಡು ಐದು ದಿನ ಕಳೆದರೂ ಭಯದಿಂದ ಮಗಳು ಐದು ದಿನ ಶವದೊಂದಿಗೆ ಕಾಲ ಕಳೆದಿದ್ದಾಳೆ. 

ಬಸವನಗುಡಿಯ ನಿವಾಸಿ ನಿವೃತ್ತ ಶಿಕ್ಷಕಿಯಾಗಿದ್ದ ರಾಜೇಶ್ವರಿ ಎಂಬುವರು ಮೃತಪಟ್ಟಿದ್ದರು. ಮಾನಸಿಕ ಅಸ್ವಸ್ಥೆಯಾಗಿದ್ದ ಮಗಳು ಶಾಂಭವಿಗೆ ಮುಂದೆ ಏನು ಮಾಡಬೇಕು ಎಂದು ತೋಚದೆ ತಾಯಿಯ ಶವದೊಂದಿಗೆ ಕಾಲ ಕಳೆದಿದ್ದಾಳೆ. 

ಮೃತ ರಾಜೇಶ್ವರಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅತಿಯಾಗಿ ಔಷದಿ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದಾರೆ. 

ಶವ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದು ನೋಡಿದ್ದಾರೆ. ಬಳಿಕ ಜಯನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.