ಬಿಬಿಎಂಪಿ ಸದಸ್ಯೆಯ ಪತಿ ಮೇಲೆ ಸಗಣಿ ಎರಚಿದ ಕಿಡಿಗೇಡಿಗಳು
ಬಿಬಿಎಂಪಿ ಸದಸ್ಯೆಯ ಪತಿ ಮತ್ತು ಮಗನ ಮೇಲೆ ಕೆಲ ಕಿಡಿಗೇಡಿಗಳು ಸಗಣಿ ಎರಚಿರುವ ಘಟನೆ ನಗರದ ಕಲಾಸಿಪಾಳ್ಯದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಬೆಂಗಳೂರು: ಬಿಬಿಎಂಪಿ ಸದಸ್ಯೆಯ ಪತಿ ಮತ್ತು ಮಗನ ಮೇಲೆ ಕೆಲ ಕಿಡಿಗೇಡಿಗಳು ಸಗಣಿ ಎರಚಿರುವ ಘಟನೆ ನಗರದ ಕಲಾಸಿಪಾಳ್ಯದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕಲಾಸಿಪಾಳ್ಯ ವಾರ್ಡ್ ಸದಸ್ಯೆ ಪ್ರತಿಭಾ ಧನರಾಜ್ ಅವರ ಪತಿ ಧನರಾಜ್ ಮತ್ತು ಪುತ್ರನ ಮೇಲೆ ಸಗಣಿ ಎರಚಲಾಗಿದ್ದು, ಕಿಡಿಗೇಡಿಗಳು ಮೊದಲೇ ಸಗಣಿ ಪ್ಯಾಕೆಟ್ ತಯಾರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳನ್ನು ಹಾಕಲಾಗಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆ ಧನರಾಜ್ ತಪಾಸಣೆ ನಡೆಸುತ್ತಿದ್ದಾಗ ಈ ವೇಳೆ ಘಟನೆ ನಡೆದಿದೆ.
ಧನರಾಜ್ ಅವರು ವಾರ್ಡ್ ಸದಸ್ಯರಲ್ಲ. ಹೀಗಿರುವಾಗ ಅವರೇಕೆ ತಪಾಸಣೆ ಮಾಡಲು ಬರಬೇಕು? ಅವರಿಗೇನು ಅಧಿಕಾರವಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಗಣಿ ಎಸೆದ ಕಾರಣಕ್ಕೆ ಪಾಲಿಕೆ ಸದಸ್ಯೆ ಪ್ರತಿಭಾ ಹಾಗೂ ಅವರ ಬೆಂಬಲಿಗರು ಕಲಾಸಿಪಾಳ್ಯ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಇನ್ನು, ಇದೇ ವೇಳೆ ಗುಂಪೊಂದು ಧನರಾಜ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಕಾರರನ್ನು ನಿಯಂತ್ರಿಸಲು ಕಲಾಸಿಪಾಳ್ಯ ಠಾಣೆಯ ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಪೊಲೀಸರು ಎಲ್ಲರನ್ನೂ ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


