ಮೈಸೂರಿನ ರೈತರಿಗೆ ಲಾಕ್ ಡೌನ್ ಎಫೆಕ್ಟ್: ನೀರಿಲ್ಲದೇ ಒಣಗಿದ ಬೆಳೆಗಳು
ಲಾಕ್ ಡೌನ್ ಹಿನ್ನೆಲೆಯಿಂದಾಗಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳು ಹಾಳಾಗಿವೆ. ಆದರೂ, ಕಬಿನಿ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಸಮುದಾಯದಲ್ಲಿ ಭರವಸೆಯನ್ನು ಹುಟ್ಟುಹಾಕಿತ್ತು ಕೊರೋನಾದಿಂದಾಗಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಮೈಸೂರು: ಲಾಕ್ ಡೌನ್ ಹಿನ್ನೆಲೆಯಿಂದಾಗಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳು ಹಾಳಾಗಿವೆ. ಆದರೂ, ಕಬಿನಿ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಸಮುದಾಯದಲ್ಲಿ ಭರವಸೆಯನ್ನು ಹುಟ್ಟುಹಾಕಿತ್ತು ಕೊರೋನಾದಿಂದಾಗಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಬೆಳೆಗಳಿಗೆ ನೀರು ಹಾಯಿಸುವುದಾಗಿ ನೀರಾವರಿ ಅಧಿಕಾರಿಗಳು ಭರವಸೆ ನೀಡಿದ್ದರು, ಆದರೆ ಪ್ರಸಕ್ತ ಇರುವ ಸನ್ನಿವೇಶದಿಂದಾಗಿ ಸಾಧ್ಯವಾಗುತ್ತಿಲ್ಲ, ತಮ್ಮ ಬೆಳೆಗಳಿಗೆ ನೀರು ಸಿಗಲಿದೆ ಎಂದು ರೈತರು ಸಂತೋಷದಿಂದಿದ್ದರು, ಹೀಗಾಗಿ ಜೋಳ, ಹೆಸರುಕಾಳು,ರಾಗಿ ಮುಂತಾದ ಕಾಳುಗಳನ್ನು ಬಿತ್ತನೆ ಮಾಡಿದ್ದರು, ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಿದ್ದರು,
ಈ ಪ್ರದೇಶದಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದರಿಂದ ಪಡೆದಿದ್ದರಿಂದ ಕೃಷಿ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿದ್ದವು. ಆದರೆ ಫೆಬ್ರವರಿಯಲ್ಲಿ 15 ದಿನಗಳ ಕಾಲ ನೀರನ್ನು ಬಿಡುಗಡೆ ಮಾಡಿದ ಜಲಸಂಪನ್ಮೂಲ ಇಲಾಖೆ, ಮಾರ್ಚ್‌ನಲ್ಲಿ ಹಾಗೆ ಮಾಡದ ಕಾರಣ, ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕಬಿನಿ ಜಲಾಶದಿಂದ ನೀರು ಹರಿಸದ ಕಾರಣ ನಾವು ಬೆಳೆದಿದ್ದ ಜೋಳದ ಬೆಳೆ ಒಣಗಿ ಹೋಗಿದೆ ಎಂದು ರೈತರು ಹೇಳಿದ್ದಾರೆ. ಬೇಸಿಗೆ ಬೆಳೆಗಳಿಗೆ ನೀರು ಹರಿಸಲು ನಮಗೆ ಅನುಮತಿ ಸಿಕ್ಕಿಲ್ಲ ಎಂದು ಮುಖ್ಯ ಅಭಿಯಂತರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


