ಬೊಮ್ಮಸಂದ್ರ ಅರಣ್ಯಪ್ರದೇಶದಲ್ಲಿ 6 ರಾಕೆಟ್ ಲಾಂಚರ್ ಗಳು ಪತ್ತೆ
ಕನಕಪುರ ತಾಲೂಕಿನ ಉಯ್ಯಂ ಬಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ ಗಳು ಪತ್ತೆಯಾಗಿದ್ದು, ಇವುಗಳಲ್ಲಿ ಒಂದು ಸಜೀವವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕನಕಪುರ: ಕನಕಪುರ ತಾಲೂಕಿನ ಉಯ್ಯಂ ಬಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ ಗಳು ಪತ್ತೆಯಾಗಿದ್ದು, ಇವುಗಳಲ್ಲಿ ಒಂದು ಸಜೀವವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಮಲ್ಟಿ ಪರ್ಪಸ್ ರಾಕೆಟ್ ಲಾಂಚರ್ ಇದಾಗಿದ್ದು, ಪ್ರತೀಯೊಂದು ಲಾಂಚರ್'ಗಳು ಮೂರು ಅಡಿ ಎತ್ತರ, ಎರಡು ಇಂಚು ಸುತ್ತಳತೆ ಉಳ್ಳ ಕಾಪರ್ ನಿಂದ ತಯಾರಿಸಿರುವ ಕೊಳವೆ ಆಕಾರದಲ್ಲಿವೆ. ಒಂದೊಂದು ಲಾಂಚರ್'ನ ಒಳಭಾಗದಲ್ಲಿ ಒಂದೂವರೆ ಅಡಿ ಎತ್ತರದ ಸಣ್ಣ ಸಣ್ಣ ಏಳು ರಾಕೆಟ್ ಗಳು ಇವೆ.
ಪೊಲೀಸ್ ಅಧಿಕಾರಿಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡಿರುವ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಆನಂತರ ಲಾಂಚರ್'ನ ಅವಶೇಷ ಹಾಗೂ ಸಜೀವ ಲಾಂಚರ್ ಅನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


