ಪತ್ರಕರ್ತ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ., ಪತ್ನಿಗೆ ಕೆಎಂಎಫ್‌ನಲ್ಲಿ ಉದ್ಯೋಗ: ಡಾ. ಅಶ್ವತ್ಥನಾರಾಯಣ
ಅಕಾಲಿಕ ನಿಧನ ಹೊಂದಿದ್ದ ಪತ್ರಕರ್ತ ಹನುಮಂತು ಅವರ ಮನೆಗೆ ತೆರಳಿ ಅವರ ಧರ್ಮಪತ್ನಿ ಶಶಿಕಲಾ ಅವರಿಗೆ ಡಾ.ಅಶ್ವಥ್ ನಾರಾಯಣ್ ಫೌಂಡೇಶನ್ ವತಿಯಿಂದ 5 ಲಕ್ಷ ರೂ. ಗಳನ್ನು ನೀಡಿದೆ.

ರಾಮನಗರ: ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತ ಹನುಮಂತು ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಪತ್ರಕರ್ತನ ಪತ್ನಿಗೆ ಕೆಎಂಎಫ್ ಜಿಲ್ಲಾ ಒಕ್ಕೂಟದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಹಾರೋಹಳ್ಳಿಯ ಪಡುವಣಗೆರೆಯಲ್ಲಿರುವ ಹನುಮಂತು ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ವೈಯಕ್ತಿಕವಾಗಿ 5 ಲಕ್ಷ ರೂ. ಚೆಕ್‌ಅನ್ನು ಕುಟುಂಬದವರಿಗೆ ನೀಡಿದರು.
ಕೆಎಂಎಫ್ ಅಧ್ಯಕ್ಷರಿಗೆ ಪತ್ರ ಬರೆದು, ಅವರ ಜತೆ ಮಾತನಾಡಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹನಮಂತಿ ಅವರ ಪತ್ನಿ ಎನ್. ಶಶಿಕಲಾ ಅವರಿಗೆ ಕೆಲಸ ಕೊಡಿಸುವುದಾಗಿ ಹೇಮಲತಾ ಅವರಿಗೆ ಭರವಸೆ ನೀಡಿದರು. ಜತೆಗೆ, ಸರ್ಕಾರದ ಕಡೆಯಿಂದ ಬರಬೇಕಿರುವ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.
ಕಳೆದ ಏಪ್ರಿಲ್ 21ರಂದು ರಾಮನಗರದಲ್ಲಿ ವರದಿಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಹನುಮಂತು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಅಂದೇ ಡಾ. ಅಶ್ವತ್ಥನಾರಾಯಣ ಅವರು 5 ಲಕ್ಷ ರೂ.ಗಳ ವೈಯಕ್ತಿಕ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು.
ಈ ಮಧ್ಯೆ, ಬೆಂಗಳೂರಿನ ಖಾಸಗಿ ವಾಹಿನಿಯ ವಾಹಿನಿಯ ಕೊರೊನಾ ಸೋಂಕಿತ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಿದ್ದರು. ಹೀಗಾಗಿ ಉಪಮುಖ್ಯಮಂತ್ರಿಯವರ ರಾಮನಗರ ಭೇಟಿಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


