ರಾಜ್ಯ

ಚಿತ್ರದುರ್ಗ: ಗುಣಮುಖರಾಗಿ ಗುಜರಾತ್​ನಿಂದ ಆಗಮಿಸಿದ್ದ ತಬ್ಲಿಘಿಗಳಲ್ಲಿ ಮತ್ತೇ ಸೋಂಕು, ಕೋಟೆನಾಡಿಗೆ ಕೊರೋನಾ ಕಂಟಕ ಶುರು!

ಗುಜರಾತ್ ನಿಂದ ಚಿತ್ರದುರ್ಗದಕ್ಕೆ ಆಗಮಿಸಿದ್ದ ತಬ್ಲಿಘಿಗಳಲ್ಲಿ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದ್ದು ಗ್ರೀನ್ ಜೋನ್ ನಲ್ಲಿದ್ದ ಕೋಟೆನಾಡಿಗೆ ಇದೀಗ ಕಂಟಕ ಶುರುವಾಗಿದೆ.

ಚಿತ್ರದುರ್ಗ: ಗುಣಮುಖರಾಗಿ ಗುಜರಾತ್​ನಿಂದ ಆಗಮಿಸಿದ್ದ ತಬ್ಲಿಘಿಗಳಲ್ಲಿ ಮತ್ತೇ ಸೋಂಕು, ಕೋಟೆನಾಡಿಗೆ ಕೊರೋನಾ ಕಂಟಕ ಶುರು!
ತಬ್ಲೀಘಿ ಜಮಾತ್
Published On :

ಚಿತ್ರದುರ್ಗ: ಗುಜರಾತ್ ನಿಂದ ಚಿತ್ರದುರ್ಗದಕ್ಕೆ ಆಗಮಿಸಿದ್ದ ತಬ್ಲಿಘಿಗಳಲ್ಲಿ ಮತ್ತೆ ಕೊರೋನಾ ಸೋಂಕು ಪತ್ತೆಯಾಗಿದ್ದು ಗ್ರೀನ್ ಜೋನ್ ನಲ್ಲಿದ್ದ ಕೋಟೆನಾಡಿಗೆ ಇದೀಗ ಕಂಟಕ ಶುರುವಾಗಿದೆ.

ದೆಹಲಿಯಲ್ಲಿ ನಡೆದಿದ್ದ ನಿಜಾಮುದ್ದೀನ್ ಜಮಾತ್ ಗೆ ತೆರಳಿದ್ದ 15 ಮಂದಿ ಪೈಕಿ ನಾಲ್ವರು ತಬ್ಲಿಘಿಗಳು ಕೊರೋನಾಗೆ ತುತ್ತಾಗಿದ್ದರು. ನಂತರ ಅವರು ಗುಜರಾತ್ ಗೆ ತೆರಳಿದ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗಿದ್ದರಿಂದ ಅವರು ರಾಜ್ಯಕ್ಕೆ ಆಗಮಿಸಿದ್ದರು. ತುಮಕೂರಿನ 18 ಮತ್ತು ಚಿತ್ರದುರ್ಗದ 15 ತಬ್ಲಿಘಿಗಳು ಒಟ್ಟಾರೆ 33 ಜನರು ಮಾರ್ಚ್ 5ರಂದು ಒಂದೇ ಬಸ್ ನಲ್ಲಿ ಚಿತ್ರದುರ್ಗಕ್ಕೆ ಆಗಮಿಸಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. 

ಚಿತ್ರದುರ್ಗಕ್ಕೆ ಆಗಮಿಸಿದ್ದ 15 ಜನರ ಪೈಕಿ ಇದೀಗ 3 ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಮೂವರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ಡಿಹೆಚ್ ಒ ಡಾ. ಪಾಲಾಕ್ಷ ಮಾಹಿತಿ ನೀಡಿದ್ದಾರೆ. 

ಸದ್ಯ ಈ ಮೂವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನುಳಿಂದ 12 ಮಂದಿ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ. 

ಕೊರೋನಾ ಸೋಂಕಿತರ ಜೊತೆ ಪ್ರಯಾಣಿಸಿದ್ದ ತುಮಕೂರಿನ 18 ಮಂದಿಗೆ ಕೊರೋನಾ ಸೋಂಕು ಹರಡುವ ಆತಂಕ ಶುರವಾಗಿದ್ದು ತುಮಕೂರು ಜಿಲ್ಲಾಡಳಿತಕ್ಕೆ ತಲೆ ನೋವು ಶುರುವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.