ಐಎಎಫ್ ನೌಕಾದಳ ಮುಖ್ಯಸ್ಥನ ಮೇಲೆ ಹಲ್ಲೆ: ಮೂವರ ಬಂಧನ
ಕ್ಷುಲ್ಲಕ ಕಾರಣಕ್ಕಾಗಿ ಐಎಎಫ್ ನೌಕಾದಳ ಮುಖ್ಯಸ್ಥನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲಿಸರು ಮೂವರನ್ನು ಬಂಧಿಸಿದ್ದಾರೆ, ಏಪ್ರಿಲ್ 29 ರಂದು ನಡೆದ ಘಟನೆ ಹಿನ್ನೆಲೆಯಲ್ಲಿ ದ್ವಾರಕಾನಗರ ನಿವಾಸಿ ಅಮೋದ್ ಸಂಜಯ್ ಎಂಬ ಅಧಿಕಾರಿ ದೂರು ದಾಖಲಿಸಿದ್ದರು

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಐಎಎಫ್ ನೌಕಾದಳ ಮುಖ್ಯಸ್ಥನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಪೊಲಿಸರು ಮೂವರನ್ನು ಬಂಧಿಸಿದ್ದಾರೆ,
ಏಪ್ರಿಲ್ 29 ರಂದು ನಡೆದ ಘಟನೆ ಹಿನ್ನೆಲೆಯಲ್ಲಿ ದ್ವಾರಕಾನಗರ ನಿವಾಸಿ ಅಮೋದ್ ಸಂಜಯ್ ಎಂಬ ಅಧಿಕಾರಿ ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಖಾಸಗಿ ಕಂಪನಿ ಎಂಡಿ ಸೇರಿದಂತೆ ಮೂವರನ್ನು ಬಂದಿಸಿದ್ದಾರೆ. ಪತ್ನಿಯೊಂದಿಗೆ ಹತ್ತಿರದ ಅಂಗಡಿಯೊಂದಕ್ಕೆ ದೂರುದಾರ ಅಧಿಕಾರಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್ ಮೆಂಟ್ ಮುಂಭಾಗ ಸಡನ್ ಆಗಿ ದ್ವಿಚಕ್ರ ವಾಹನ ಬಂದ ಕಾರಣ ಬ್ರೇಕ್ ಹಾಕಲಾಯಿತು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ, ಅಲ್ಲಿಂದ ಹೋದ ಬೈಕ್ ಸವಾರ ಮತ್ತೆ ಇಬ್ಬರೊಂದಿಗೆ ವಾಪಸ್ ಬಂದು ಅಮೋದ್ ಅವರ ಕಾರಿನ ಕೀ ಕಸಿದು ಕೊಂಡಿದ್ದಾರೆ.
ಸುಮಾರು 15 ರಿಂದ 20 ನಿಮಿಷದವರೆಗೆ ಅಮೋದ್ ಅವರನ್ನು ಬೈಯ್ದು ಅವರ ಮೇಲೆ ಹಲ್ಲೆ ನಡೆಸಿದ್ದಾಗಗಿ ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಕಾರಿನ ಬಂಪರ್ ಗೂ ಹಾನಿ ಮಾಡಿದ್ದಾರೆ ಎಂದು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


