ಬೆಂಗಳೂರಿನಲ್ಲಿ ಎಣ್ಣೆ ಗಲಾಟೆ: ನಶೆಯಲ್ಲಿ ಸ್ನೇಹಿತನನ್ನು ಕೊಂದು ಪರಾರಿಯಾದ ರೌಡಿಶೀಟರ್
ಕಳೆದ 40 ದಿನದಿಂದ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯಪ್ರಿಯರಿಗಾಗಿ ರಾಜ್ಯ ಸರ್ಕಾರ ಸೋಮವಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಮೊದಲ ದಿನವೇ ಮದ್ಯ ಅಮಲಿನಲ್ಲಿ ಕೊಲೆ ನಡೆದಿದೆ.

ಬೆಂಗಳೂರು): ಕಳೆದ 40 ದಿನದಿಂದ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯಪ್ರಿಯರಿಗಾಗಿ ರಾಜ್ಯ ಸರ್ಕಾರ ಸೋಮವಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು, ಮೊದಲ ದಿನವೇ ಮದ್ಯ ಅಮಲಿನಲ್ಲಿ ಕೊಲೆ ನಡೆದಿದೆ.
ಇಂದು ಎಣ್ಣೆ ಸಿಕ್ಕ ಬೆನ್ನಲ್ಲೆ ರೌಡಿಶೀಟರ್ ಒಬ್ಬ ತನ್ನ ಸ್ನೀಹಿತನ ಎದೆಗೆ ಚಾಕಿ ಇರಿದು ದಾರುಣವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
25 ವರ್ಷದ ಕರಣ್ ಸಿಂಗ್ ಕೊಲೆಯಾದ ದುರ್ದೈವಿ. 2017ರಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕರಣ್ ಸಿಂಗ್ ಹಾಗೂ ಕೊಲೆ ಆರೋಪಿ ಪ್ರಭು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ಗಳಾಗಿದ್ದರು.
ಇಂದು ಬೆಳಗ್ಗೆಯಿಂದಲೇ ಮದ್ಯದ ಅಂಗಡಿಗಳು ತೆರೆದ ಪರಿಣಾಮ ಮೃತ ಕರಣ್ ಸಿಂಗ್ ಆತನ ಸ್ನೇಹಿತ ಪ್ರಭು ಹಾಗೂ ಇತರರು ಎಣ್ಣೆ ಖರೀದಿಸಿ ರೂಮ್ ವೊಂದರಲ್ಲಿ ಪಾರ್ಟಿ ಮಾಡುತ್ತಿದ್ದರು. ನಶೆ ಏರುತ್ತಿದ್ದಂತೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ವಿಕೋಪಗೊಂಡು ರೌಡಿಶೀಟರ್ ಪ್ರಭು ತನ್ನ ಸ್ನೇಹಿತನಾದ ಮತ್ತೊಬ್ಬ ರೌಡಿಶೀಟರ್ ಕರಣ್ ಸಿಂಗ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತ ಸ್ತ್ರಾವದಿಂದ ರೌಡಿಶೀಟರ್ ಕರಣ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯ ಬಳಿಕೆ ಕೊಲೆ ಆರೋಪಿ ಪ್ರಭು ಸ್ಥಳದಿಂದ ಕಾಲ್ಕಿತ್ತಿದ್ದು, ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಭುಗಾಗಿ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


