ಮಾರಕ ಕೊರೋನಾ ವೈರಸ್ ಗುಣಪಡಿಸಬಲ್ಲ ಪರಿಣಾಮಕಾರಿ ಔಷಧಿ ಇದೆ, ಉಚಿತವಾಗಿ ನೀಡಲು ಸಿದ್ಧ: ಸಂತೋಷ್ ಗುರೂಜಿ
ವಿಶ್ವದ 190ಕ್ಕೂ ಅಧಿಕ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಿ ಇದೆ ಎಂದು ಖ್ಯಾತ ಆಯುರ್ವೇದ ತಜ್ಞ ಸಂತೋಷ್ ಗುರೂಜಿ ಹೇಳಿದ್ದಾರೆ.

ಬೆಂಗಳೂರು: ವಿಶ್ವದ 190ಕ್ಕೂ ಅಧಿಕ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಿ ಇದೆ ಎಂದು ಖ್ಯಾತ ಆಯುರ್ವೇದ ತಜ್ಞ ಸಂತೋಷ್ ಗುರೂಜಿ ಹೇಳಿದ್ದಾರೆ.
ಈ ಕುರಿತಂತೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸಂತೋಷ್ ಗುರೂಜಿ ಅವರು, ಇಡೀ ದೇಶ ಮಾರಕ ಕೊರೋನಾ ವೈರಸ್ ನಿಂದಾಗಿ ತತ್ತರಿಸುತ್ತಿದೆ. ಆದರೆ ಈ ವೈರಸ್ ಗೆ ಭಯ ಪಡುವ ಅಗತ್ಯವಿಲ್ಲ. ಈ ಮಾರಕ ವೈರಸ್ ಗೆ ತಮ್ಮ ಆಶ್ರಮ ಪರಿಣಾಮಕಾರಿ ಔಷಧಿ ಕಂಡುಹಿಡಿದಿದೆ. ವಾಸ, ತಾಲಿಶ್ಪತ್ರ, ವಂಶಲೋಚನ, ಅಮೃತ ಇತ್ಯಾದಿ ಅತ್ಯಮೂಲ್ಯ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾದ ಆಯುರ್ ಶ್ವಾಸ ಚೂರ್ಣವನ್ನು ತಯಾರಿಸಲಾಗಿದೆ. ಈಗಾಗಲೇ ಕೊರೋನಾ ವೈರಸ್ ಗೆ ವೈದ್ಯರು ಪರಿಣಾಮಕಾರಿ ಔಷಧಿ ನೀಡುತ್ತಿದ್ದು, ಅದರ ಜೊತೆಗೆ ನಮ್ಮ ಈ ಆಯುರ್ ಶ್ವಾಸ ಚೂರ್ಣವನ್ನು ಔಷಧಿಯಾಗಿ ತೆಗೆದುಕೊಂಡರೆ ಖಂಡಿತಾ ಕೊರೋನಾ ವೈರಸ್ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ಈ ಔಷಧಿಯನ್ನು ನಾವು ಸೋಂಕಿತರಿಗೆ ಉಚಿತವಾಗಿ ನೀಡಲು ಸಿದ್ಧವಿದ್ದು, ಇದಕ್ಕಾಗಿ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ. ಇದೇ ವೇಳೆ ತಮಗೆ ಯಾವುದೇ ರೀತಿಯ ಹೆಸರು ಅಥವಾ ಖ್ಯಾತಿ ಬೇಕಿಲ್ಲ. ಭಾರತದಿಂದ ಈ ಕೊರೋನಾ ಹಿಮ್ಮೆಟಿದರೆ ಸಾಕು. ಅದೇ ನಮ್ಮ ಧ್ಯೇಯ. ನಾನೂ ಕೂಡ ಆಯುರ್ವೇದದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಆ ಅನುಭವದ ಮೂಲಕ ಈ ಔಷಧಿ ತಯಾರಿಸಲಾಗಿದೆ. ಈ ಔಷಧಿಯನ್ನು ಸರ್ಕಾರ ಬೇಕಿದ್ದರೆ ಪರೀಕ್ಷೆ ನಡೆಸಿ ಬಳಿಕವೇ ರೋಗಿಗಳಿಗೆ ನೀಡಲಿ ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಕೊರೋನಾ ಸೋಂಕು ಅಪಾಯಕಾರಿ ಮಟ್ಟಕ್ಕೆ ಬೆಳೆದಿಲ್ಲ. ಈಗಲೇ ನಾವು ಇದನ್ನು ಚಿವುಟಿ ಹಾಕಬೇಕಿದೆ. ಅದು ಸಾಧ್ಯ ಕೂಡ. ಹೀಗಾಗಿ ನಮ್ಮ ಔಷಧಿಯನ್ನು ಒಮ್ಮೆ ಪರೀಕ್ಷಿಸಿ ಎಂದು ಸರ್ಕಾರ ಮತ್ತು ಆಯುಷ್ ಇಲಾಖೆಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


