ದಾವಣಗೆರೆ: ಈ ಗ್ರಾಮದಲ್ಲಿ ರಸ್ತೆ ಬದಿಯೇ ಮೃತದೇಹಗಳ ಸಮಾಧಿ, ದಹನ!
ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.

ದಾವಣಗೆರೆ:ಮೃತದೇಹವನ್ನು ಸ್ಮಶಾನದಲ್ಲಿ ದಹಿಸಲು ಅಥವಾ ಸಮಾಧಿ ಮಾಡಲು ಅವಕಾಶ ಸಿಗದೆ ರಸ್ತೆಬದಿಯಲ್ಲಿ ಕೆಳಮಟ್ಟದ ಸಮುದಾಯದವರು ದಹನ ಮಾಡುವ ಪರಿಸ್ಥಿತಿ ದಾವಣಗೆರೆಯ ಪುಟ್ಟಗನಲ್ ಗ್ರಾಮದ ಕಡಜ್ಜಿ ಬಳಿ ನಡೆಯುತ್ತಿದೆ.
ಮೇಲ್ವರ್ಗದ ಸಮುದಾಯದವರು ಮೃತದೇಹವನ್ನು ದಹನ ಮಾಡುತ್ತಿರುವ ಸ್ಥಳದಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ ಎಂದು ಕೆಳ ಸಮುದಾಯದವರು ಆರೋಪಿಸುತ್ತಿದ್ದಾರೆ, ರಸ್ತೆ ಬದಿ ಮೃತದೇಹಗಳನ್ನು ದಹಿಸುತ್ತಿರುವುದರಿಂದ ಸಾರ್ವಜನಿಕರು ಇಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.ಅಲ್ಲದೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ತಮಗೆ ಶವ ದಹನ ಮಾಡುವ ಸ್ಥಳ ನೀಡಬೇಕೆಂದು ಈ ಸಮುದಾಯದವರು ಸ್ಥಳೀಯಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯತ್ ಪದ್ಮ ಬಸವಂತಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 91 ಗ್ರಾಮಗಳಲ್ಲಿ ಸಮಾಧಿಗಾಗಿ ಸಾರ್ವಜನಿಕ ಸ್ಮಶಾನಗಳಿಲ್ಲ. ಆದ್ದರಿಂದ, ನಾವು ಈ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಮಶಾನಗಳನ್ನು ಸ್ಥಾಪಿಸಲು ಪ್ರಾರಂಭಿಸುತ್ತೇವೆ ಎಂದರು.
ಸರ್ಕಾರಿ ಜಮೀನುಗಳು ಲಭ್ಯವಿಲ್ಲದ ಸ್ಥಳಗಳಲ್ಲಿ ಸ್ಮಶಾನಗಳನ್ನು ಸ್ಥಾಪಿಸಲು ಯಾರೂ ಭೂಮಿಯನ್ನು ಹಸ್ತಾಂತರಿಸಲು ಮುಂದೆ ಬಂದಿಲ್ಲ ಮತ್ತು ಈ ಸಮಸ್ಯೆಯನ್ನು ಜಿಲ್ಲಾಡಳಿತದೊಂದಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


