ಅಮಾಯಕರ ನಿವೇಶನ ಕಬಳಿಸಲು ಯತ್ನ: ವಂಚಕ ಸ್ಟಾಂಪ್ ವಿನಿ ಬಂಧನ
ಅಮಾಯಕರ ನಿವೇಶನಗಳನ್ನು ಕಬಳಿಸಲು ಹೊಂಚು ಹಾಕಿದ್ದ ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು: ಅಮಾಯಕರ ನಿವೇಶನಗಳನ್ನು ಕಬಳಿಸಲು ಹೊಂಚು ಹಾಕಿದ್ದ ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ
ಪ್ರಮುಖ ಆರೋಪಿ ಲಗ್ಗೆರೆ ಕೆಂಪೇಗೌಡ ಲೇಔಟ್ ನ4ನೇ ಮೈನ್ ನಿವಾಸಿ ವಿನಯ್ ಕುಮಾರ್ ಅಲಿಯಾಸ್ ಸ್ಟಾಂಪ್ ವಿನಿ ಬಂಧಿತ ಆರೋಪಿ
ಘಟನೆಯ ವಿವರ: ರೂಪಲಕ್ಷ್ಮಿ ಎಂಬವರು ಬಸವೇಶ್ವರನಗರದ ಕುರುಬರಹಳ್ಳಿ ಕರ್ನಾಟಕ ಲೇಔಟ್‌ನ ನಿವೇಶನವೊಂದರ ಮಾಲೀಕರಾಗಿದ್ದು, ಅಮೆರಿಕದಲ್ಲಿ ವಾಸವಾಗಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಆರೋಪಿಗಳಾದ ವಿನಯ್ ಕುಮಾರ್, ವಿಶ್ವನಾಥ್ ಹಾಗೂ ಇತರರು ಈ ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ಶಿವಮ್ಮ ಎಂಬವರಿಗೆ ಹಣದ ಆಮಿಷವೊಡ್ಡಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದೊಯ್ದು ಆಕೆಯನ್ನು ಮೂಲ ಮಾಲೀಕಳೆಂದು ಬಿಂಬಿಸಿ ಈ ಸೈಟನ್ನು ಆರೋಪಿ ರಾಜ್ ಚಂದ್ರಶೇಖರ್ ಎಂಬಾತನ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.
ಈ ಮೂಲಕ ಅಕ್ರಮ ಹಣ ಸಂಪಾದನೆ ಮಾಡಿಕೊಂಡಿದ್ದರು. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


