ಟಿಇಟಿ ಪರೀಕ್ಷೆಯನ್ನು ಏಪ್ರಿಲ್.11ರಂದೇ ನಡೆಸಲು ನಿರ್ಧಾರ: ಸಚಿವ ಸುರೇಶ್ ಕುಮಾರ್
ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳು ಏಪ್ರಿಲ್ 14 ರಂದೇ ಬಂದಿರುವುದರಿಂದ, ಸಹಸ್ರಾರು ಅಭ್ಯರ್ಥಿಗಳ ಮನವಿಯ ಮೇರೆಗೆ ಟಿಇಟಿ ಪರೀಕ್ಷೆಗಳನ್ನು ಏಪ್ರಿಲ್ 11ರಂದು(ಎರಡನೇ ಶನಿವಾರ) ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳು ಏಪ್ರಿಲ್ 14 ರಂದೇ ಬಂದಿರುವುದರಿಂದ, ಸಹಸ್ರಾರು ಅಭ್ಯರ್ಥಿಗಳ ಮನವಿಯ ಮೇರೆಗೆ ಟಿಇಟಿ ಪರೀಕ್ಷೆಗಳನ್ನು ಏಪ್ರಿಲ್ 11ರಂದು(ಎರಡನೇ ಶನಿವಾರ) ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜ.24ರಂದು ನೋಟಿಫಿಕೇಶನ್ ಪ್ರಕಟಿಸಿತ್ತು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆ.25 ಕೊನೆಯ ದಿನವಾಗಿತ್ತು. ಮಾರ್ಚ್ 15ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ನಂತರ ಕಾರಣಾಂತರಗಳಿಂದ ಪರೀಕ್ಷೆಯನ್ನು ಏಪ್ರಿಲ್ 14ಕ್ಕೆ ಮುಂದೂಡಿತು. ಆದರೆ ಅದೇ ದಿನ ಕೆಸೆಟ್ ಮತ್ತು ಟಿಇಟಿ ಎರಡೂ ಪರೀಕ್ಷೆಗಳು ಬಂದಿರುವ ಕಾರಣ ಮತ್ತೆ ಏಪ್ರಿಲ್ 11ರಂದು ಎರಡನೇ ಶನಿವಾರದಂದೇ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಅನೇಕ ಅಭ್ಯರ್ಥಿಗಳು ಟಿಇಟಿ ಮತ್ತು ಕೆಸೆಟ್ ಎರಡೂ ಪರೀಕ್ಷೆಗಳನ್ನು ಬರೆಯಲು ಅರ್ಜಿ ಸಲ್ಲಿಸಿರುತ್ತಾರೆ. ಇದರಿಂದ ಎರಡೂ ಒಂದೇ ದಿನ ಇರುವುದರಿಂದ ಅವರಿಗೆ ಒಂದು ಪರೀಕ್ಷೆಗೆ ಮಾತ್ರ ಹಾಜರಾಗಲು ಸಾಧ್ಯವಾಗುತ್ತದೆ. ಸಾವಿರಾರು ಅಭ್ಯರ್ಥಿಗಳು ಮನವಿ ಮಾಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


