ರಾಜ್ಯ

ಕಲಬುರಗಿ: ಕೊರೋನಾ ವೈರಸ್‌ಗೆ ಬಲಿಯಾಗಿದ್ದ ವ್ಯಕ್ತಿಯ ಮಗನ ಸಂದರ್ಶನ, ಮೂವರು ಪತ್ರಕರ್ತರ ಮೇಲೂ ನಿಗಾ!

ಕರ್ನಾಟಕದ ಕಲಬುರಗಿಯಲ್ಲಿ ಕೊರೋನಾ ವೈರಸ್ ಗೆ ವೃದ್ಧರೊಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ಮೃತ ವೃದ್ಧನ ಮಗನ ಜೊತೆ ಸಂದರ್ಶನ ನಡೆಸಿದ್ದು ಹೀಗಾಗಿ ಮೂವರು ಪತ್ರಕರ್ತರ ಮೇಲೂ ತೀವ್ರ ನಿಗಾ ವಹಿಸಲಾಗಿದೆ.

ಕಲಬುರಗಿ: ಕೊರೋನಾ ವೈರಸ್‌ಗೆ ಬಲಿಯಾಗಿದ್ದ ವ್ಯಕ್ತಿಯ ಮಗನ ಸಂದರ್ಶನ, ಮೂವರು ಪತ್ರಕರ್ತರ ಮೇಲೂ ನಿಗಾ!
ಸಂಗ್ರಹ ಚಿತ್ರ
Published On :

ಕಲಬುರಗಿ(ಕರ್ನಾಟಕ): ಕರ್ನಾಟಕದ ಕಲಬುರಗಿಯಲ್ಲಿ ಕೊರೋನಾ ವೈರಸ್ ಗೆ ವೃದ್ಧರೊಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ಮೃತ ವೃದ್ಧನ ಮಗನ ಜೊತೆ ಸಂದರ್ಶನ ನಡೆಸಿದ್ದು ಹೀಗಾಗಿ ಮೂವರು ಪತ್ರಕರ್ತರ ಮೇಲೂ ತೀವ್ರ ನಿಗಾ ವಹಿಸಲಾಗಿದೆ. 

ಕಳೆದ ಮಂಗಳವಾರ ರಾತ್ರಿ ಕೋವಿಡ್-19 ನಿಂದ ಮೃತಪಟ್ಟ 76 ವರ್ಷದ ವ್ಯಕ್ತಿಯ ಮಗನನ್ನು ಗುರುವಾರ ಸಂದರ್ಶನ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರನ್ನು ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

"ಮುನ್ನೆಚ್ಚರಿಕೆ ಕ್ರಮವಾಗಿ, ಮೂವರು ಮಾಧ್ಯಮ ವ್ಯಕ್ತಿಗಳು ತಮ್ಮ ಮನೆಗಳಲ್ಲಿ ಉಳಿಯುವಂತೆ ನಾವು ಸಲಹೆ ನೀಡಿದ್ದೇವೆ ಮತ್ತು ಮೃತ ವೃದ್ಧನ ಮಗನಿಗೆ ಕೊರೋನಾ ವೈರಸ್ ಸೋಂಕು ತಗುಲಿದೆಯಾ ಎಂಬುದರ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಶರತ್ ಹೇಳಿದರು.

ಮೃತ ವೃದ್ಧನ ಮಗ, ಆತನ ಪತ್ನಿ, ಸಹೋದರಿ ಮತ್ತು ಆಕೆಯ ಮಗನನ್ನು ನಗರದ ಸರ್ಕಾರಿ ಇಎಸ್ಐ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ತೀವ್ರ ನಿಗಾ ವಹಿಸಲಾಗಿದೆ ಎಂದರು. 

ಈ ನಾಲ್ವರ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸೌದಿ ಅರೇಬಿಯಾದಿಂದ ಹಿಂದಿರುಗಿದಾಗಿನಿಂದ ಅವರು ಸಹ ಮೃತ ವೃದ್ಧನ ಇದ್ದಿದ್ದರಿಂದ ಅವರಿಗೂ ಸೋಂಕು ತಗುಲಿದೆಯಾ ಎಂದು ತಿಳಿಯಲು ಪರೀಕ್ಷಾ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಶರತ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.