ರಾಜ್ಯದ 7 ಕಡೆ ರೈಲ್ವೇ ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ನಿಗಾ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇಯ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು, ಧಾರವಾಡ, ಬೆಂಗಳೂರು ಸೇರಿ ರಾಜ್ಯದ 7 ಸ್ಥಳಗಳಲ್ಲಿ ವೈದ್ಯಕೀಯ ನಿಗಾ ವ್ಯವಸ್ಥೆ ಮಾಡಿದೆ.

ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇಯ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು, ಧಾರವಾಡ, ಬೆಂಗಳೂರು ಸೇರಿ ರಾಜ್ಯದ 7 ಸ್ಥಳಗಳಲ್ಲಿ ವೈದ್ಯಕೀಯ ನಿಗಾ ವ್ಯವಸ್ಥೆ ಮಾಡಿದೆ.
ಮೈಸೂರಿನ ಅಶೋಕಪುರ ಮತ್ತು ಧಾರವಾಡದ ಮಲ್ಟಿ ಡಿಸಿಪ್ಲೀನ್ ಟ್ರೈನಿಂಗ್ ಸೆಂಟರ್, ಹುಬ್ಬಳ್ಳಿಯ ಡೀಸೆಲ್ ತರಬೇತಿ ಕೇಂದ್ರ, ರೈಲ್ವೇ ಮಹಿಳಾ ಭದ್ರತಾ ಪಡೆ ಬ್ಯಾರಕ್, ಬೆಂಗಳೂರು ಮೇಲ್ವಿಚಾರಣ ತರಬೇತಿ ಕಾಲೇಜು, ವಿಭಾಗೀಯ ತರಬೇತಿ ಕೇಂದ್ರ ಮತ್ತು ರಾಮನಗರದಲ್ಲಿನ ಭಾರತೀಯ ರೈಲ್ವೇ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಒಟ್ಟು 229 ಕೊಠಿಗಳಲ್ಲಿ 706 ಹಾಸಿಗದೆಯುಳ್ಳ ವೈದ್ಯಕೀಯ ನಿಗಾ ವ್ಯವಸ್ಥೆ ಕಲ್ಪಿಸಿದೆ. ಕೊರೋನಾ ವೈರಸ್ ಸೋಕಿತರು ಪತ್ತೆಯಾದರೆ ಈ ವೈದ್ಯಕೀಯ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುವುದು.
ಅಂತೆಯೇ ಈಗಾಗಲೇ ಶುಚಿತ್ವ ಹಾಗೂ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲು ರೈಲು ನಿಲ್ದಾಣಗಳಲ್ಲಿ ವಿಡಿಯೋ ಪ್ರಸಾರ ಮಾಡಲಾಗುತ್ತಿದೆ. ಅಲ್ಲದೆ, ಸ್ಪರ್ಶದಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆಯಿರುವುದರಿಂದ ನೈಋತ್ಯ ರೈಲ್ವೇ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ನೌಕರರ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಾಜರಾತಿಗಾಗಿ ಬದಲಿ ವ್ಯವಸ್ಥೆತ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ವೈರಸ್ ಸೋಂಕು ತಪ್ಪಿಸಲು ವಲಯದ ವ್ಯಾಪ್ತಿಯ ಎಲ್ಲಾ ರೈಲು ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಸ್ವಚ್ಛತೆ ಆದ್ಯತೆ ನೀಡಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


