ರಾಜ್ಯ

ಶ್ರೀಶ್ರೀ ರವಿಶಂಕರ್ ಆಶ್ರಮದ ಸಾಕಾನೆಗೆ ಮಾವುತ ಬಲಿ

ಸಾಕು ಆನೆಯೊಂದು ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ನಗರ ಹೊರವಲಯದಲ್ಲಿರುವ ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ವರದಿಯಾಗಿದೆ.

ಶ್ರೀಶ್ರೀ ರವಿಶಂಕರ್ ಆಶ್ರಮದ ಸಾಕಾನೆಗೆ ಮಾವುತ ಬಲಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ಸಾಕು ಆನೆಯೊಂದು ಮಾವುತನನ್ನು ಕಾಲಿನಿಂದ ತುಳಿದು ಸಾಯಿಸಿರುವ ಘಟನೆ ನಗರ ಹೊರವಲಯದಲ್ಲಿರುವ ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ವರದಿಯಾಗಿದೆ. 

ಕೇರಳ ಮೂಲದ 34 ವರ್ಷದ ರಾಜೇಶ್ ಮೃತ ಮಾವುತ. ಮೇವು ಹಾಕಲು ತೆರಳಿದ್ದಾಗ ಮದವೇರಿದ ಆನೆ ಏಕಾಏಕೀ ಕಾಲಿನಿಂದ ತುಳಿದು ಮಾವುತನನ್ನು ಸಾಯಿಸಿದೆ ಎನ್ನಲಾಗಿದೆ.

ರವಿಶಂಕರ್ ಗುರೂಜಿ ಅವರು ಆಶ್ರಮದಲ್ಲಿ ಎರಡು ಆನೆಗಳನ್ನು ಸಾಕಿದ್ದು, ಸುಮಾರು 8 ವರ್ಷಗಳಿಂದ ರಾಜೇಶ್, ಆನೆಗಳ ಪಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.