ಬೀದರ್: ನಿಶ್ಚಿತಾರ್ಥ ಆಗಿಲ್ಲ ಅಂತ ಮಹಿಳಾ ದಿನಾಚರಣೆಯಂದೆ ಬಾವಿಗೆ ಬಿದ್ದು ಶಿಕ್ಷಕಿ ಆತ್ಮಹತ್ಯೆ!
ಹೆಣ್ಮಕ್ಕಳೆ ಸ್ಟ್ರಾಂಗು ಗುರು ಅಂತಾ ಹೇಳುತ್ತಾರೆ. ಆದರೆ ಮಕ್ಕಳಿಗೆ ಬುದ್ಧಿವಾದ ಹೇಳಿ ತಿದ್ದಬೇಕಿದ್ದ ಶಿಕ್ಷಕಿಯೊಬ್ಬರು ನಿಶ್ಚಿತಾರ್ಥ ಆಗಲಿಲ್ಲ ಅಂತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್: ಹೆಣ್ಮಕ್ಕಳೆ ಸ್ಟ್ರಾಂಗು ಗುರು ಅಂತಾ ಹೇಳುತ್ತಾರೆ. ಆದರೆ ಮಕ್ಕಳಿಗೆ ಬುದ್ಧಿವಾದ ಹೇಳಿ ತಿದ್ದಬೇಕಿದ್ದ ಶಿಕ್ಷಕಿಯೊಬ್ಬರು ನಿಶ್ಚಿತಾರ್ಥ ಆಗಲಿಲ್ಲ ಅಂತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
24 ವರ್ಷದ ಪೂಜಾ ಎಂಬುವರು ಭಾಲ್ಕಿ ತಾಲೂಕಿನ ಭಾಲ್ಕೇಶ್ವರ ದೇವಸ್ಥಾನದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆಟ್ ನೋಟ್ ನಲ್ಲಿ ಪೂಜಾ ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿಟ್ಟಿದ್ದಾರೆ.

ಪೂಜಾ ಭಾಲ್ಕಿಯ ಖಾಸಗಿ ಚನ್ನಬಸವ ಪದವಿ ಕಾಲೇಜಿನಲ್ಲಿ ರಾಸಾಯನಿಕ ಶಾಸ್ತ್ರದ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು ವರನ ಕಡೆಯವರು ಹಲವು ಬಾರಿ ನೋಡಿ ಹೋಗಿದ್ದರು ನಿಶ್ಚಿತಾರ್ಥ ಮಾಡಿಕೊಂಡಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾಲ್ಕಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


