ಫ್ಲಿಪ್‌ಕಾರ್ಟ್ ಸಹ ಸಂಸ್ಥಾಪಕ ಸಚಿನ್ ವಿರುದ್ಧ ವರದಕ್ಷಿಣೆ ಕೇಸ್: ಬನ್ಸಾಲ್ ಕುಟುಂಬ ಮಿಸ್ಸಿಂಗ್!
ಫ್ಲಿಪ್‌ಕಾರ್ಟ್ ಸಂಸ್ಥೆಯ ಮಾಜಿ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ವಿರುದ್ಧ ಅವರ ಪತ್ನಿ ಪ್ರಿಯಾ ಬನ್ಸಾಲ್ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು : ಫ್ಲಿಪ್‌ಕಾರ್ಟ್ ಸಂಸ್ಥೆಯ ಮಾಜಿ ಸಹ ಸಂಸ್ಥಾಪಕ ಸಚಿನ್ ಬನ್ಸಾಲ್ ವಿರುದ್ಧ ಅವರ ಪತ್ನಿ ಪ್ರಿಯಾ ಬನ್ಸಾಲ್ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು, ಎಫ್‌ಐಆರ್ ದಾಖಲಾಗಿದೆ.
ಸಚಿನ್ ಪತ್ನಿ ಪ್ರಿಯಾ ಅವರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆಗಾಗಿ 50 ಲಕ್ಷ ರು ಖರ್ಚು ಮಾಡಲಾಗಿತ್ತು. 11 ಲಕ್ಷ ರು ನಗದು ವರದಕ್ಷಿಣೆ ರೂಪದಲ್ಲಿ ಬನ್ಸಾಲ್ ಗೆ ನೀಡಲಾಗಿದೆ ಎಂದು ಫೆಬ್ರುವರಿ 28ರಂದು ಬೆಂಗಳೂರಿನ ಕೋರಮಂಗಲ ಪೊಲೀಸ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ನನ್ನ ಹೆಸರಿನಲ್ಲಿರುವ ಆಸ್ತಿಯನ್ನು ಸಚಿನ್ ಹೆಸರಿಗೆ ವರ್ಗಾಯಿಸುವಂತೆ ಅವರು ಒತ್ತಾಯಿಸುತ್ತಿದ್ದರು. ಇದಕ್ಕೆ ಒಪ್ಪದೇ ಇದ್ದಾಗ ಅತ್ತೆ ಮತ್ತು ಮಾವ ಕಿರುಕುಳ ನೀಡಿದ್ದಾರೆ ಎಂದು ಪ್ರಿಯಾ ಆರೋಪಿಸಿದ್ದಾರೆ. ನನ್ನ ಸಹೋದರಿ ರಾಧಿಕಾ ಗೋಯಲ್ ದೆಹಲಿಯಲ್ಲಿದ್ದಾಗ ಸಚಿನ್ ಆಕೆಗೂ ಲೈಂಗಿಕ ಕಿರುಕುಳ ನೀಡಿದ್ದಾರೆ.
ನನ್ನ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಸಚಿನ್ ಯತ್ನಿಸಿದ್ದರು. ನಾನು ಇದಕ್ಕೆ ಒಪ್ಪದೇ ಇದ್ದಾಗ 2019 ಅಕ್ಟೋಬರ್ 20ರಂದು ಅವರು ನನಗೆ ದೈಹಿಕ ಕಿರುಕುಳ ನೀಡಿದ್ದಾರೆ. ವರದಕ್ಷಿಣೆಗಾಗಿ ನನ್ನ ಅತ್ತೆ ಮತ್ತು ಮಾವ ಪೀಡಿಸುತ್ತಿದ್ದರು ಎಂದು ಪ್ರಿಯಾ ಆರೋಪಿಸಿರುವುದಾಗಿ ಎಫ್‌ಐಆರ್‌ನಲ್ಲಿದೆ.
ಸಚಿನ್ ಬನ್ಸಾಲ್, ಅವರ ಅಪ್ಪ ಸತ್ ಪ್ರಕಾಶ್ ಅಗರ್‌ವಾಲ್, ಸಹೋದರ ನಿತಿನ್ ಬನ್ಸಾಲ್ ಮತ್ತು ತಾಯಿ ಕಿರಣ್ ಬನ್ಸಾಲ್ ಅವರು ಮದುವೆ ವೇಳೆ ವರದಕ್ಷಿಣೆ ಮತ್ತು ಉಡುಗೊರೆಗಾಗಿ ಬೇಡಿಕೆಯೊಡ್ಡಿದ್ದರು ಎಂದು ಪ್ರಿಯಾ ಆರೋಪಿಸಿದ್ದಾರೆ. ಸದ್ಯ ಸಚಿನ್ ಬನ್ಸಾಲ್ ನೆವಿ ಟೆಕ್ನಾಲಜೀಸ್ ಸಿಇಓ ಆಗಿ ಕೆಲಸ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


