ರಾಜ್ಯ

ಪೊಲೀಸ್ ಸೋಗಲ್ಲಿ ಮಹಿಳಾ ಹೋಂಗಾರ್ಡ್'ಗೆ ಕಿರಕುಳ: ದೂರು ದಾಖಲು

ಪೊಲೀಸ್ ಸೋಗಿನಲ್ಲಿ ಮಹಿಳಾ ಹೋಂಗಾರ್ಡ್'ಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಪೊಲೀಸ್ ಸೋಗಲ್ಲಿ ಮಹಿಳಾ ಹೋಂಗಾರ್ಡ್'ಗೆ ಕಿರಕುಳ: ದೂರು ದಾಖಲು
ಸಂಗ್ರಹ ಚಿತ್ರ
Published On :

ಬೆಂಗಳೂರು: ಪೊಲೀಸ್ ಸೋಗಿನಲ್ಲಿ ಮಹಿಳಾ ಹೋಂಗಾರ್ಡ್'ಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. 

ಈ ಸಂಬಂಧ 36 ಮಹಿಳಾ ಹೋಂಗಾರ್ಡ್ ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. 

ಮಹಿಳೆಯು ನಗರದ ಠಾಣೆಯೊಂದರಲ್ಲಿ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 3 ತಿಂಗಳ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸಿಎಎ ಪ್ರತಿಭಟನಾ ಸ್ಥಳದ ಬಂದೋಬಸ್ತ್'ಗೆ ಮಹಿಳೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಕಾನ್ ಸ್ಟೇಬಲ್ ಮಹೇಶ್ ಎಂಬುವರ ಪರಿಚಯವಾಗಿತ್ತು. 

ಪರಿಚಯವಾದ 15 ದಿನದ ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ ಕಾನ್ ಸ್ಟೇಬಲ್ ಮಹೇಶ್ ಹೆಸರಿನಲ್ಲಿ ಮಹಿಳೆ ಜೊತೆ ಮಾತನಾಡಿದ್ದ. ಇದೇ ರೀತಿ 3-4 ಬಾರಿ ಮಾತನಾಡಿದ್ದ. ನಂತರ ಮತ್ತೊಂದು ಸಂಖ್ಯೆಯಲ್ಲಿ ಕರೆ ಮಾಡಿದ್ದ ಆರೋಪಿ, ನಾನು ಪೇದೆ ಮಹೇಶ್ ಸ್ನೇಹಿತ. ನಿನ್ನೆ ಎಲ್ಲಾ ವಿಷಯ ನನಗೆ ಗೊತ್ತಿದೆ. ನೀನು ಏಕೆ ಮಹೇಳ್ ಜೊತೆ ಅಸಭ್ಯವಾಗಿ ವರ್ತಿಸಿ ತೊಂದರೆ ಕೊಡುತ್ತಿದ್ದೀಯಾ. ನನ್ನ ವೈಯಕ್ತಿಕ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇವೆ. ನೀನು ಇನ್ನು ಮುಂದೆ ಇದೇ ರೀತಿ ಮಾಡಿದರೆ ವಿಡಿಯೋ ಮತ್ತು ಫೋಟೋಗಳನ್ನು ನಿನ್ನ ಪತಿ ಮತ್ತು ಕುಟುಂಬದವರಿಗೆ ಕಳಹಿಸಿ, ನಿನ್ನ ಮಾನ ಹರಾಜು ಹಾಕುತ್ತೇನೆ. ನೀನು ಹಣ ನೀಡಿದರೆ ಸುಮ್ಮನಿರುತ್ತೇನೆಂದು ಬೆದರಿಕೆವೊಡ್ಡಿದ್ದಾನೆ. 

ಫೆ.16ರಂದು ಕರೆ ಮಾಡಿ ನಾನು ನಿನ್ನ ಭೇಟಿ ಮಾಡಬೇಕು. ಎಲ್ಲಿ ಸಿಗುತ್ತೀಯಾ ಎಂದು ಕೇಳಿದ್ದ. ಭೇಟಿಯಾಗಲು ದೂರುದಾರರು ನಿರಾಕರಿಸಿದಾಗ ಆರೋಪಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾನೆ. 

ಈ ಸಂಬಂಧ ಮಹಿಳಾ ಹೋಂ ಗಾರ್ಡ್ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಪೇದೆ ಪಾತ್ರ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಹೋಂಗಾರ್ಡ್'ಗೆ ಆರೋಪಿ ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದ್ದು, ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.