ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು, ಕೊಲ್ಕತ್ತಾದಲ್ಲಿ ಅತ್ತೆಯನ್ನೂ ಕೊಲೆಗೈದು ಉದ್ಯಮಿ ಆತ್ಮಹತ್ಯೆ
ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಕೊಲ್ಕತ್ತಾದಲ್ಲಿ ಅತ್ತೆಯನ್ನ ಕೊಂದ ಟೆಕ್ಕಿಯೊಬ್ಬ ನಂತರ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಮಿತ್ ಎಂಬಾ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಕುಟುಂಬ ಕಲಹದಿಂದ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ಕೊಲ್ಕತ್ತಾದಲ್ಲಿ ಅತ್ತೆಯನ್ನ ಕೊಂದ ಉದ್ಯಮಿಯೊಬ್ಬ ನಂತರ ತಾನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಟುಂಬ ಕಲಹದಿಂದ ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ನಂತರ ವಿಮಾನದ ಮೂಲಕ ಕೋಲ್ಕತ್ತಾಗೆ ತೆರಳಿ ಅಲ್ಲಿ ಅತ್ತೆಯನ್ನು ಗುಂಡಿಕ್ಕಿ ಕೊಂದು ನಂತರ ತಾನೂ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿರುವ ಭಯಾನಕ ಸರಣಿ ಕೊಲೆ ಘಟನೆ ವರದಿಯಾಗಿದೆ.
42 ವರ್ಷದ ಅಮಿತ್ ಅಗರ್ವಾಲ್ ತನ್ನ ಪತ್ನಿ ಶಿಲ್ಪಿ ಧಂಧಾನಿಯಾ ಅವರನ್ನು ಬೆಂಗಳೂರಿನ ಮಹದೇವಪುರ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ನಂತರ ಕೋಲ್ಕತ್ತಾಗೆ ಹೋಗಿ ಅತ್ತೆ ಲಲಿತ ಧಂಧಾನಿಯಾ ಅವರನ್ನು ಶೂಟ್ ಮಾಡಿ ಕೊಂದಿದ್ದಾನೆ. ನಂತರ ತಾನೂ ಅದೇ ಪಿಸ್ತೂಲ್ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಲ್ಕೊತ್ತಾ ಪೊಲೀಸರ ಮಾಹಿತಿ ಮೇರೆಗೆ ಮಹಾದೇವಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮಾಹಿತಿ ಪಡೆದ ಪೊಲೀಸರು ಆತ ವಾಸವಿದ್ದ ಅಪಾರ್ಟ್ ಮೆಂಟ್ ಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ, ಶಿಲ್ಪಿ ಅಗರ್ ವಾಲ್ ಮೃತದೇಹ ಅಡುಕೋಣೆಯಲ್ಲಿ ಬಿದ್ದಿರುವುದನ್ನ ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ.
ವೇಳೆ ಪೊಲೀಸರು ಮನೆ ಸುತ್ತ ಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಅಮಿತ್ ಬ್ಯಾಗಿನಲ್ಲಿ ಮರಣ ಪತ್ರ ಸಿಕ್ಕಿದೆ. ಇದರಲ್ಲಿ ತನ್ನ ಪತ್ನಿಯನ್ನ ಕೊಂದಿರುವುದಾಗಿ ಅಮಿತ್ ತಿಳಿಸಿದ್ದ. ಸದ್ಯ ಬೆಂಗಳೂರು ಹಾಗೂ ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಾಥಮಿಕವಾಗಿ ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂಬುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


