ಕೊರೋನಾ ಜೊತೆ ಮತ್ತೆ ವಕ್ಕರಿಸಿದ ಡೆಂಗ್ಯೂ: 18 ದಿನಗಳಲ್ಲಿ ಬೆಂಗಳೂರಿನಲ್ಲಿ 60 ಕೇಸ್
ಇಡೀ ಪ್ರಪಂಚವೇ ಕೊರೋನಾ ವಿರುದ್ಧ ಹೋರಾಡುತ್ತಿರುವಾಗ ಬೆಂಗಳೂರಿನಲ್ಲಿ ಸದ್ದಿಲ್ಲದೇ ಡೆಂಗ್ಯೂ ಕಾಲಿಟ್ಟಿದೆ. ಜೂನ್ 1 ರಿಂದ ಜೂನ್ 18 ರವರೆಗೆ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 60 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು: ಇಡೀ ಪ್ರಪಂಚವೇ ಕೊರೋನಾ ವಿರುದ್ಧ ಹೋರಾಡುತ್ತಿರುವಾಗ ಬೆಂಗಳೂರಿನಲ್ಲಿ ಸದ್ದಿಲ್ಲದೇ ಡೆಂಗ್ಯೂ ಕಾಲಿಟ್ಟಿದೆ. ಜೂನ್ 1 ರಿಂದ ಜೂನ್ 18 ರವರೆಗೆ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 60 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಈ ವರ್ಷ ರಾಜ್ಯಾದ್ಯಂತ 1704 ಕೇಸ್ ದಾಖಲಾಗಿದ್ದು ಬೆಂಗಳೂರಿನಲ್ಲಿ 337 ಪ್ರಕರಣ ದಾಖಲಾಗಿವೆ.
ಕಳೆದ ಕೆಲವು ದಿನಳ ಹಿಂದೆ ಮಧ್ಯಂತರ ಮಳೆಯಾದ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರ ಆರಂಭವಾಗಿದೆ. ಮಳೆ ನೀರಿನಲ್ಲಿ ಸೊಳ್ಳೆಗಳ ವಂಶಾಭಿೃದ್ಧಿಯಾಗುತ್ತಿದೆ. ಈ ತಿಂಗಳಲ್ಲಿ ಡೆಂಗ್ಯೂ ಲಕ್ಷಣಗಳಿರುವ ರೋಗಿಗಳು ಕಾಣ ಸಿಗುತ್ತಿದ್ದಾರೆ.
ಕೆರೆ, ಕೊಳ ಹಾಗೂ ಅಪಾರ್ಟ್ ಮೆಂಟ್ ಗಳಲ್ಲಿರುವ ಈಜುಕೊಳ ಮತ್ತು ಗಾರ್ಡನ್ ಗಳು ವೈರಸ್ ಳ ತಾಣವಾಗುತ್ತಿವೆ ಎಂದು ಫೋರ್ಟೀಸ್ ಆಸ್ಪತ್ರೆ ನಿರ್ದೇಶಕಿ ಡಾ,ಶೀಲಾ ಚಕ್ರವರ್ತಿ ಹೇಳಿದ್ದಾರೆ
ಡೆಂಗ್ಯೂ ರೋಗ ಲಕ್ಷಣಗಳಿರುವ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ, ಅವರಲ್ಲಿ ಕೆಲವರಿಗೆ ಡೆಂಗ್ಯೂ ನೆಗೆಟಿವ್ ಬಂದಿದೆ, ಡೆಂಗ್ಯೂ ಸದ್ಯ ಗುಣಪಡಿಸಬಹುದಾದ ಜ್ವರವಾಗಿದೆ. ವಾಂತಿ ಮತ್ತು ದೇಹದ ನಿರ್ಜಲೀಕರಣ ಇದರ ಪ್ರಮುಖ ಲಕ್ಷಣವಾಗಿದೆ, ಡೆಂಗ್ಯೂ ವಾಸಿಯಾಗಲು 3ರಿಂದ 10 ದಿನಗಳ ಚಿಕಿತ್ಸೆ ನೀಡಬೇಕಾಗುತ್ತದೆ.
ELISA IGM ಪರೀಕ್ಷೆ ಮತ್ತು NS1 ಪರೀಕ್ಷೆಗಳಿಂದ ಕಂಡು ಹಿಡಿಯಬಹುದಾಗಿದೆ. ಎಲಿಸಾ ಐಜಿಎಂ ಪರೀಕ್ಷೆಯು ಜ್ವರ ಪ್ರಾರಂಭವಾದ ನಾಲ್ಕು ದಿನಗಳ ನಂತರ ರೋಗಿಯಲ್ಲಿನ ಐಜಿಎಂ ಪ್ರತಿಕಾಯಗಳನ್ನು ಪತ್ತೆ ಮಾಡುತ್ತದೆ ಮತ್ತು ವೈರಸ್ ಅನ್ನು ಪತ್ತೆ ಮಾಡುತ್ತದೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯ ಮನೋಹರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


