ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಥಾನಕ್ಕೆ ಕಮಲ್ ಪಂಥ್?
ಸಿಲಿಕಾನ್ ಸಿಟಿ ಬೆಂಗಳೂರಿಗೆ ಶೀಘ್ರವೇ ನೂತನ ಆಯುಕ್ತರ ನೇಮಕವಾಗುವ ಸಾಧ್ಯತೆಯಿದೆ, ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂಥ್ ನೇಮಕ ಸಾಧ್ಯತೆಯಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಶೀಘ್ರವೇ ನೂತನ ಆಯುಕ್ತರ ನೇಮಕವಾಗುವ ಸಾಧ್ಯತೆಯಿದೆ, ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂಥ್ ನೇಮಕ ಸಾಧ್ಯತೆಯಿದೆ.
ಭಾಸ್ಕರ್ ರಾವ್ ಅವರ ಬ್ಯಾಚ್ ಮೇಟ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಗುಪ್ತಚರ ಇಲಾಖೆ ಹೆಚ್ಚುವರಿ ಎಡಿಜಿಪಿ ಕಮಲ್ ಪಂತ್ ನೇಮಕ ಮಾಡುವ ಸಾಧ್ಯತೆ ಇದೆ. ರಾವ್ ಮತ್ತು ಪಂಥ್ 1990 ರ ಐಪಿಎಸ್ ಬ್ಯಾಚ್ ನವರು.
ನಗರ ಪೊಲೀಸ್ ಆಯುಕ್ತ ಹುದ್ದೆಗೆ ಮೂವರು ಅಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ, ಪಂಥ್ ಅವರ ಜೊತೆಗೆ ಸುನೀಲ್ ಅಗರ್ ವಾಲ್ ಮತ್ತು ಅಮೃತ್ ಪೌಲ್ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಅಮೃತ್ ಪೌಲ್ ಅವರನ್ನು ಇದೇ ವರ್ಷದ ಜನವರಿ ಅಂತ್ಯದಲ್ಲಿ ಎಡಿಜಿಪಿಯಾಗಿ ಬಡ್ತಿ ನೀಡಲಾಗಿತ್ತು. ಕಮಿಷನರ್ ಅವರ ಜೊತೆಗೆ ನಗರದ ಮತ್ತಷ್ಟು ಹಿರಿಯ ಅಧಿಕಾರಿಗಳ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿ.ಎಸ್. ಸಂಧು (1989) ಆಗಸ್ಟ್ 1 ರಂದು ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಬಡ್ತಿ ಪಡೆಯಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


