ಮೈಸೂರಿನಲ್ಲಿ ಕೊರೋನಾ ಹೆಚ್ಚಳ: ಲೌಡ್ ಸ್ಪೀಕರ್ ಮೂಲಕ ಜಾಗೃತಿಗೆ ಮುಂದಾದ ಮಹಾನಗರ ಪಾಲಿಕೆ
ಮೈಸೂರಿನಲ್ಲಿ ಸಾರ್ವಜನಿಕ ಪ್ರಕಟಣೆಗಳಿಗಾಗಿ ಕಸದ ಮಿನಿ ಲಾರಿಯ ಮೇಲೆ ಫಿಕ್ಸ್ ಮಾಡಲಾಗಿರುವ ಲೌಡ್ ಸ್ಪೀಕರ್ ಗಳು ಈಗ ಅರಮನೆ ನಗರಿಯ ನಿವಾಸಿಗಳ ಗಮನ ಸೆಳೆಯುತ್ತಿವೆ.

ಮೈಸೂರು: ಮೈಸೂರಿನಲ್ಲಿ ಸಾರ್ವಜನಿಕ ಪ್ರಕಟಣೆಗಳಿಗಾಗಿ ಕಸದ ಮಿನಿ ಲಾರಿಯ ಮೇಲೆ ಫಿಕ್ಸ್ ಮಾಡಲಾಗಿರುವ ಲೌಡ್ ಸ್ಪೀಕರ್ ಗಳು ಈಗ ಅರಮನೆ ನಗರಿಯ ನಿವಾಸಿಗಳ ಗಮನ ಸೆಳೆಯುತ್ತಿವೆ.
ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಕಸದ ಮಿನಿ ಲಾರಿಗಳ ಮೇಲಿರುವ ಲೌಡ್ ಸ್ಪೀಕರ್ ಅನ್ನು ಬಳಸಿಕೊಂಡು ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಕೆಲವು ಕಸ ಸಂಗ್ರಹಿಸುವ ಮಿನಿ ಟ್ರಕ್ಗಳು ಮತ್ತು ಆಟೋಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಜನರಿಗೆ COVID-19 ಬಗ್ಗೆ ಅರಿವು ಮೂಡಿಸಲು ಮತ್ತು ವೈರಸ್ ಹರಡುವುದನ್ನು ತಡೆಯಲು ಹಾಗೂ ಸುರಕ್ಷಿತವಾಗಿರಲು ಅನುಸರಿಸಬೇಕಾದ ಕ್ರಮಗಳು ತಿಳಿಸಲಾಗುತ್ತಿದೆ.
ನಗರದ ಎಲ್ಲಾ 65 ವಾರ್ಡ್ಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವ ಪೌರಕರ್ಮಿಕರು ರೆಕಾರ್ಡ್ ಮಾಡಿದ ಆಡಿಯೊವನ್ನು ಪ್ಲೇ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


