ಕೊರೋನಾದಿಂದ ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರ ನೇರವೇರಿಸಲು ಸಂಬಂಧಿಕರ ನಕಾರ: ಸಂಸ್ಕಾರ ನೆರವೇರಿಸಿದ ಎನ್ ಜಿ ಓ
65 ವರ್ಷದ ಅಲೆಕ್ಸಾಂಡರ್ ಶುಕ್ರವಾರ ಕೊರೋನಾದಿಂದ ಸಾವನ್ನಪ್ಪಿದ್ದರು, ಈ ವೇಳೆ ಅವರ ಅಂತ್ಯ ಸಂಸ್ಕಾರ ಮಾಡಲು ಅವರ ಸಂಬಂಧಿಕರು ಮತ್ತು ಕ್ರಿಶ್ಟಿಯನ್ನ ಸ್ಮಶಾನದ ಕೆಲಸಗಾರರು ಸಂಸ್ಕಾರ ಮಾಡಲು ನಿರಾಕರಿಸಿದರು. ಈ ವೇಳೆ ಮರ್ಸಿ ಏಂಜಲ್ಸ್ ಎಂಬ ಎನ್ ಜಿ ಒ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದೆ.

ಬೆಂಗಳೂರು: 65 ವರ್ಷದ ಅಲೆಕ್ಸಾಂಡರ್ ಶುಕ್ರವಾರ ಕೊರೋನಾದಿಂದ ಸಾವನ್ನಪ್ಪಿದ್ದರು, ಈ ವೇಳೆ ಅವರ ಅಂತ್ಯ ಸಂಸ್ಕಾರ ಮಾಡಲು ಅವರ ಸಂಬಂಧಿಕರು ಮತ್ತು ಕ್ರಿಶ್ಟಿಯನ್ನ ಸ್ಮಶಾನದ ಕೆಲಸಗಾರರು ಸಂಸ್ಕಾರ ಮಾಡಲು ನಿರಾಕರಿಸಿದರು. ಈ ವೇಳೆ ಮರ್ಸಿ ಏಂಜಲ್ಸ್ ಎಂಬ ಎನ್ ಜಿ ಒ ಶನಿವಾರ ಅಂತ್ಯಕ್ರಿಯೆ ನೆರವೇರಿಸಿದೆ.
ಕುಟುಂಬದ ದೂರದ ಸಂಬಂಧಿ ಜೆರ್ರಿ ಜಾಕಿನ್ ಎನ್‌ಜಿಒ ಮರ್ಸಿ ಮಿಷನ್‌ಗೆ ಹೊಂದಿಕೊಂಡ ಘಟಕದ ಕೆಲಸದ ಬಗ್ಗೆ ತಿಳಿದಿದ್ದರು, ಹೀಗಾಗಿ ಅವರು ಎನ್ ಜಿ ಓಗೆ ವಿಷಯ ತಿಳಿಸಿದರು. ನಂತರ ಮರ್ಸಿ ಏಂಜಲ್ಸ್ ಅಂತ್ಯ ಸಂಸ್ಕಾರ ನೆರವೇರಿಸಿದರು.
ಮೈಸೂರು ರಸ್ತೆಯಲ್ಲಿರು ಕ್ರಿಶ್ಚಿಯನ್ ಸಮಾಧಿ ಸ್ಥಳಕ್ಕೆ ಇದೇ ಮೊದಲ ಕೋವಿಡ್ ಶವ ಆಗಗಮಿಸಿದ್ದು ಅದರ ಸಂಸ್ಕಾರ ಹೇಗೆ ನಡೆಸುವುದು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಅವರು ನಿರಾಕರಿಸಿದರು ಎಂದು ಮೃತನ ಸಂಬಂಧಿ ಜಾಕಿನ್ ತಿಳಿಸಿದ್ದಾರೆ.
ಎನ್ ಜಿ ಓ ಸ್ವಯಂ ಸೇವಕರು ಆಸ್ಪತ್ರೆಗೆ ಬಂದು ಶವವನ್ನು ಆ್ಯಂಬುಲೆನ್ಸ್ ನಲ್ಲಿ ಕೊಂಡೊಯ್ದು, ಶವ ಸಂಸ್ಕಾರಕ್ಕೆ ನಿಗದಿಯಾಗಿದ್ದ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೇರವರಿಸಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


