ಬಯೋಕಾನ್ ಸಂಸ್ಥೆ ಸಿದ್ಧಪಡಿಸಿರುವ ಕೋವಿಡ್ ಲಸಿಕೆ 'ಇಟೋಲಿಝುಮಬ್': ಪ್ರತಿ ಸೀಸೆಗೆ 8 ಸಾವಿರ
ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ 'ಇಟೋಲಿಝುಮಬ್' ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

ಬೆಂಗಳೂರು:ಬೆಂಗಳೂರು ಮೂಲದ ಬಯೋಫಾರ್ಮಾಟಿಕಲ್ ವಲಯದ ಪ್ರಸಿದ್ಧ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ
'ಇಟೋಲಿಝುಮಬ್'ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.
ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೋವಾಲ್ ಬಯೋಲಾಜಿಕಲ್ ಥೆರಪಿಯನ್ನು
ನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು,'ಇಟೋಲಿಝುಮಬ್' ಹಲವರ ಜೀವವನ್ನು ಉಳಿಸಿದೆ. ಇದನ್ನು ಮಾರುಕಟ್ಟೆಗೆ
ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್
ಮಜುಂದಾರ್ ಷಾ ತಿಳಿಸಿದ್ದಾರೆ.
25ಎಂಜಿಯ 5 ಎಂಎಲ್ ಇಂಜೆಕ್ಷನ್ ನಿಂದ ಕೋವಿಡ್-19 ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ರೋಗಿಗಳಿಗೆ ಚಿಕಿತ್ಸೆ
ನೀಡಬಹುದಾಗಿದೆ.ಪ್ರತಿ ಬಾಟಲಿ ಬೆಲೆ 8 ಸಾವಿರ ರೂ.ಆಗಿರುತ್ತದೆ. ಇಂತಹ ನಾಲ್ಕು ಬಾಟಲಿಗಳನ್ನು ನೀಡಬೇಕಾಗುತ್ತದೆ.
ಅಂದರೆ ಚಿಕಿತ್ಸೆಗಾಗಿ ಒಟ್ಟು 32 ಸಾವಿರ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದ್ದಾರೆ.
ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ ಹೋರಾಡುವಂತಾ ಇಟೋಲಿಝುಮಬ್,ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ.
ಕೊರೊನಾವೈರಸ್ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಇಟೋಲಿಝುಮಬ್ ಉತ್ತಮವಾಗಿ ಕೆಲಸ ಮಾಡಿರುವುದು
ಗೊತ್ತಾಗಿದೆ ಎಂದು ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


