ಮಕ್ಕಳಿಗೆ ಲ್ಯಾಪ್'ಟಾಪ್ ವಿತರಿಸಿ, ಇಲ್ಲವೇ ಆನ್'ಲೈನ್ ಕ್ಲಾಸ್ ನಿಲ್ಲಿಸಿ: ಸರ್ಕಾರಕ್ಕೆ ಬೀದಿ ವ್ಯಾಪಾರಿಗಳ ಆಗ್ರಹ
ಮಕ್ಕಳಿಗೆ ಲ್ಯಾಪ್'ಟಾಪ್ ವಿತರಿಸಿ, ಇಲ್ಲವೇ ಆನ್'ಲೈನ್ ಕ್ಲಾಸ್ ನಿಲ್ಲಿಸಿ ಎಂದು ಸರ್ಕಾರಕ್ಕೆ ಪೋಷಕರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು: ಮಕ್ಕಳಿಗೆ ಲ್ಯಾಪ್'ಟಾಪ್ ವಿತರಿಸಿ, ಇಲ್ಲವೇ ಆನ್'ಲೈನ್ ಕ್ಲಾಸ್ ನಿಲ್ಲಿಸಿ ಎಂದು ಸರ್ಕಾರಕ್ಕೆ ಪೋಷಕರು ಆಗ್ರಹಿಸುತ್ತಿದ್ದಾರೆ.
ನಾನು ಮತ್ತು ನನ್ನ ಪತಿ ಇಬ್ಬರೂ ಮಗಳಿಗೆ ಆನ್'ಲೈನ್ ತರಗತಿ ಆರಂಭವಾಗುತ್ತದೆಂದು ಮನೆಯಲ್ಲಿಯೇ ಕುಳಿದರೆ ಸರಕುಗಳನ್ನು ಮಾರುವವರಾರು? ಎಂದು ಜಯನಗರದ ಬೀದಿ ವ್ಯಾಪಾರಿ ಶಾಂತಿಯೆಂಬುವವರು ಪ್ರಶ್ನಿಸಿದ್ದಾರೆ.
ಕೊರೋನಾ ವೈರಸ್ ಭಯದಿಂದ ಲಾಕ್'ಡೌನ್ ಸಡಿಲಗೊಂಡರು ಈಗಲೂ ಜನರು ಸರಕು ಖರೀದಿ ಮಾಡಲು ಬರುತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ತಾತ್ಕಾಲಿಕವಾಗಿ ಆನ್'ಲೈನ್ ಶಿಕ್ಷಣವನ್ನು ನಿಲ್ಲಿಸಬೇಕು. ಇಲ್ಲವೇ ಮಕ್ಕಳಿಗೆ ಲ್ಯಾಪ್'ಟಾಪ್ ವಿತರಿಸಬೇಕೆಂದು ಬೆಂಗಳೂರು ಬೀದಿ ವ್ಯಾಪಾರಿಗಳ ಸಂಘ ಆಗ್ರಹಿಸಿದೆ.
ಕೆಲವು ಬೀದಿ ವ್ಯಾಪಾರಿಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್ ನೀಡಿದ್ದಾರೆ. ಆದರೆ, ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಇರುವಾಗ ಏಕಕಾಲದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗಬೇಕಾದರೆ ಅವರು ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಸಂಘ ತಿಳಿಸಿದೆ.
ಈಗಾಗಲೇ ಬಾಡಿಗೆಗಳನ್ನು ಕಟ್ಟಲು ಸಾಧ್ಯವಾಗದೆ, ಸರಕುಗಳು ಮಾರಾಟವಾಗದೆ ವ್ಯಾಪಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆನ್'ಲೈನ್ ಶಿಕ್ಷಣ ಕೊಡಿಸುವುದು, ಶಾಲೆಗೆ ಶುಲ್ಕ ಕಟ್ಟುವುದು, ಮೊಬೈಲ್'ಗಳಿಗೆ ಇಂಟರ್ನೆಟ್ ರೀಚಾರ್ಜ್ ಮಾಡುವುದು ಕಷ್ಟಕರವಾಗುತ್ತದೆ.
ಇಂಟರ್ನೆಟ್ ಬಳಕೆಯಿಂದ ಕೆಲ ಮಕ್ಕಳು ಅಡ್ಡದಾರಿಗಿಳಿಯುವ ಸಾಧ್ಯತೆಗಳಿವೆ. ಶಿಕ್ಷಣ ಪಡೆದುಕೊಳ್ಳುತ್ತಿದ್ದೇವೆಂದು ವಿಡಿಯೋ ನೋಡುವುದು, ಗೇಮ್ ಆಡುವುದನ್ನು ಮಾಡುತ್ತಾರೆ. ಅನಕ್ಷರಸ್ಥರಿಗೆ ಆನ್'ಲೈನ್ ಶಿಕ್ಷಣ ಅರ್ಥವಾಗುವುದಿಲ್ಲ. ಝೂಮ್ ಆ್ಯಪ್ ಬಳಕೆ ಅವರಿಗೆ ತಿಳಿಯುವುದಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


