ಬೆಂಗಳೂರು: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸುವಂತೆ ಹೇಳಿದ ವೇಶ್ಯೆ ಹತ್ಯೆ
ಲೈಂಗಿಕ ಕ್ರಿಯೆಗೆ ಕಾಂಡೋಮ್ ಬಳಸುವಂತೆ ಹೇಳಿದ ಕಾರಣಕ್ಕೆ ವೇಶ್ಯೆಯೊಬ್ಬರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಸೆಕ್ಯುರಿಟಿ ಗಾರ್ಡ್ ವೊಬ್ಬ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಂಗಳೂರು: ಲೈಂಗಿಕ ಕ್ರಿಯೆಗೆ ಕಾಂಡೋಮ್ ಬಳಸುವಂತೆ ಹೇಳಿದ ಕಾರಣಕ್ಕೆ ವೇಶ್ಯೆಯೊಬ್ಬರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಸೆಕ್ಯುರಿಟಿ ಗಾರ್ಡ್ ವೊಬ್ಬ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿಯ ನಿವಾಸಿ ಮುಕುಂದ ಬಂಧಿತ ವ್ಯಕ್ತಿ. ಜ.11 ರಂದು ಮಧ್ಯಾಹ್ನ 1 ಗಂಟೆ ವೇಳೆ ಗಾಯತ್ರಿ ನಗರದ 4ನೇ ಕ್ರಾಸ್ ನಲ್ಲಿ ಮನೆಯಲ್ಲಿ ಮಂಜುಳಾ ಹತ್ಯೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪ ಖಾಸಗಿ ಕಂಪನಿಯಲ್ಲಿ ಮುಕುಂದ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಕಂಪನಿ ಹತ್ತಿರದಲ್ಲಿ ವಾಸವಾಗಿದ್ದ. ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ವಂತ ಊರಿಗೆ ಆತ ಹೋಗುತ್ತಿದ್ದ. ಅದೇ ರೀತಿ ಜ.11 ರಂದು ಊರಿಗೆ ಹೋಗಲು ಬಂದಾಗ ಮೆಜೆಸ್ಟಿಕ್ ನಲ್ಲಿ ಆತನಿಗೆ ಮಂಜುಳಾ ಪರಿಚಯವಾಗಿದೆ. ಲೈಂಗಿಕ ಕ್ರಿಯೆಗೆ ಆಕೆ ಕರೆದಿದ್ದಾಳೆ. ಇದಕ್ಕೆ ರೂ.2000 ನೀಡುವಂತೆ ಬೇಡಿಕೆ ಇಟ್ಟಿದ್ದಳು. ಕೊನೆಗೆ ಪರಸ್ಪರ ಮಾತುಕತೆ ನಡೆದು ರೂ.1,500 ಒಪ್ಪಿಗೆಯಾಗಿದೆ. ಬಳಿಕ ಮುಂಗಡವಾಗಿ ಆರೋಪಿಯಿಂದ ರೂ.500 ಸಂದಾಯವಾಗಿದೆ.
ನಂತರ ಮೆಜೆಸ್ಟಿಕ್ ನಿಂದ ಸೆಂಟ್ರಲ್ ಬಸ್ಸಿನಲ್ಲಿ ಬಂದ ಅವರು, ಅಲ್ಲಿಂದ ಆಟೋದಲ್ಲಿ ಮುಕುಂದನನ್ನು ಗಾಯತ್ರಿ ನಗರತ ತನ್ನ ಮನೆಗೆ ಕರೆತಂದಿದ್ದಳು. ಆಗ ಸುರಕ್ಷಿತ ಲೈಂಗಿಕ ಕ್ರಿಯೆಗೆ ಕಾಂಡೋಮ್ ಹಾಕಿಕೊಳ್ಳುವಂತೆ ಆಕೆ ಹೇಳಿದ್ದಾಳೆ. ಇದಕ್ಕೆ ಮುಕುಂದ ನಿರಾಕರಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಚಾಕುವಿನಿಂದ ಮಂಜುಳಾ ಕತ್ತುಕುಯ್ದು ಪರಾರಿಯಾಗಿದ್ದಾನೆ. ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು, ಕೊನೆಗೆ ಸಿಸಿಟಿವಿ ದೃಶ್ಯಾವಳಿ ಬೆನ್ನು ಹತ್ತಿದಾಗ ಹಂತಕ ಸಿಕ್ಕಿಬಿದ್ದಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


